ADVERTISEMENT

‘ಅಸ್ಮಿತ’ ಸಬ್‌ ಜೂನಿಯರ್‌ ಬಾಲಕಿಯರ ಹಾಕಿ ಚಾಂಪಿಯನ್‌ಷಿಪ್‌: ಡಿ.1ಕ್ಕೆ ಟ್ರಯಲ್ಸ್‌

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 19:44 IST
Last Updated 25 ನವೆಂಬರ್ 2025, 19:44 IST
   

ಬೆಂಗಳೂರು: ಮುಂಬರುವ, ದಕ್ಷಿಣ ವಲಯ ‘ಅಸ್ಮಿತ’ ಸಬ್‌ ಜೂನಿಯರ್‌ ಬಾಲಕಿಯರ ಹಾಕಿ ಚಾಂಪಿಯನ್‌ಷಿಪ್‌ಗೆ ರಾಜ್ಯ ತಂಡವನ್ನು ಆಯ್ಕೆ ಮಾಡಲು ಹಾಕಿ ಕರ್ನಾಟಕ ಸಂಸ್ಥೆಯು ಡಿಸೆಂಬರ್‌ 1ರಂದು ಆಯ್ಕೆ ಟ್ರಯಲ್ಸ್‌ ಆಯೋಜಿಸಿದೆ.

ಶಾಂತಿನಗರದಲ್ಲಿನ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಹಾಕಿ ಕ್ರೀಡಾಂಗಣದಲ್ಲಿ ಡಿ.1ರ ಬೆಳಿಗ್ಗೆ 9.30ಕ್ಕೆ ಟ್ರಯಲ್ಸ್‌ ಆರಂಭವಾಗಲಿದೆ ಎಂದು ಹಾಕಿ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಎ.ಬಿ.ಸುಬ್ಬಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಚಾಂಪಿಯನ್‌ಷಿಪ್‌ ಆಂಧ್ರ ಪ್ರದೇಶದ ಕಡಪದಲ್ಲಿ ಡಿಸೆಂಬರ್‌ 26ರಿಂದ 30ರ ವರೆಗೆ ನಡೆಯಲಿದೆ. 2009ರ ಜನವರಿ 1ರಂದು ಅಥವಾ ನಂತರ ಜನಿಸಿದ ಆಟಗಾರ್ತಿಯರು ಮಾತ್ರ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಬಹುದಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.