ADVERTISEMENT

ಹಾಕಿ: ಮೈಸೂರು ಮೇಲುಗೈ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 21:19 IST
Last Updated 22 ನವೆಂಬರ್ 2022, 21:19 IST
ಮೈಸೂರು ಹಾಗೂ ಕಲಬುರಗಿ ತಂಡಗಳ ಪೈಪೋಟಿ
ಮೈಸೂರು ಹಾಗೂ ಕಲಬುರಗಿ ತಂಡಗಳ ಪೈಪೋಟಿ   

ಮಡಿಕೇರಿ: ಮೈಸೂರು ವಿಭಾಗ ತಂಡಗಳು ಭಾರತ ಕ್ರೀಡಾ ಪ್ರಾಧಿಕಾರದ ಹಾಕಿ ಮೈದಾನದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ, ಬಾಲಕಿಯರ ರಾಜ್ಯ ಮಟ್ಟದ ಹಾಕಿ ಟೂರ್ನಿಯಲ್ಲಿ ಮೇಲುಗೈ ಸಾಧಿಸಿದವು.

ಮಂಗಳವಾರ ನಡೆದ ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಬೆಂಗಳೂರು 4–1ರಿಂದ ಬೆಳಗಾವಿಯನ್ನು ಮಣಿಸಿದರೆ, ಪ್ರಾಥಮಿಕ ಬಾಲಕಿಯರ ವಿಭಾಗದಲ್ಲಿ ಬೆಳಗಾವಿಯು 2–0 ಗೋಲುಗಳಿಂದ ಬೆಂಗಳೂರನ್ನು ಸೋಲಿಸಿತು. ಪ್ರಾಥಮಿಕ ಬಾಲಕರ ವಿಭಾ ಗದಲ್ಲಿ ಬೆಂಗಳೂರನ್ನು ಕಲಬುರಗಿಯು 5–0ಯಿಂದ ಮಣಿಸಿತು. 17 ವರ್ಷದೊಳಗಿನ ಬಾಲಕರ ವಿಭಾ ಗದಲ್ಲಿ ಮೈಸೂರು ಕಲಬುರಗಿಯನ್ನು 6–1ರಿಂದ ಮಣಿಸಿತು.

17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಮೈಸೂರು ತಂಡವು ಬೆಂಗಳೂರು ತಂಡವನ್ನು 9–0 ಗೋಲಿನಿಂದ ಸೋಲಿಸಿ ಪಾರಮ್ಯ ಮೆರೆಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.