ADVERTISEMENT

ಮುಂಬೈ ಚೇ ರಾಜೆ ಜಯಭೇರಿ

ಐಐಪಿ ಕಬಡ್ಡಿ ಲೀಗ್‌: ಮಹೇಶ್‌ ಮಿಂಚಿನ ಆಟ

​ಪ್ರಜಾವಾಣಿ ವಾರ್ತೆ
Published 1 ಜೂನ್ 2019, 20:15 IST
Last Updated 1 ಜೂನ್ 2019, 20:15 IST
ಬೆಂಗಳೂರಿನಲ್ಲಿ ಶನಿವಾರ ನಡೆದ ಐಐಪಿಕೆಎಲ್ ಟೂರ್ನಿಯ ಪಂದ್ಯದಲ್ಲಿ ಮುಂಬೈ ಚೆ ರಾಜೇ ಹಾಗೂ ಹರಿಯಾಣ ಹೀರೋಸ್‌ ತಂಡಗಳ ಆಟಗಾರರು ಪಾಯಿಂಟ್‌ಗಾಗಿ ಸೆಣಸಾಡಿದ ರೀತಿ –ಪ್ರಜಾವಾಣಿ ಚಿತ್ರ/ಇರ್ಷಾದ್ ಮಹಮ್ಮದ್‌
ಬೆಂಗಳೂರಿನಲ್ಲಿ ಶನಿವಾರ ನಡೆದ ಐಐಪಿಕೆಎಲ್ ಟೂರ್ನಿಯ ಪಂದ್ಯದಲ್ಲಿ ಮುಂಬೈ ಚೆ ರಾಜೇ ಹಾಗೂ ಹರಿಯಾಣ ಹೀರೋಸ್‌ ತಂಡಗಳ ಆಟಗಾರರು ಪಾಯಿಂಟ್‌ಗಾಗಿ ಸೆಣಸಾಡಿದ ರೀತಿ –ಪ್ರಜಾವಾಣಿ ಚಿತ್ರ/ಇರ್ಷಾದ್ ಮಹಮ್ಮದ್‌   

ಬೆಂಗಳೂರು: ರೋಚಕ ಹಣಾಹಣಿಗೆ ಸಾಕ್ಷಿಯಾದ ಐಐಪಿಕೆಎಲ್‌ ಅಂತಿಮ ಲೆಗ್‌ನ ಮೊದಲ ಲೀಗ್‌ ಪಂದ್ಯದಲ್ಲಿ ಮುಂಬೈ ಚೇ ರಾಜೇ ತಂಡ ಹರಿಯಾಣ ಹೀರೋಸ್‌ ತಂಡವನ್ನು 69–53 ಪಾಯಿಂಟ್‌ಗಳಿಂದ ಮಣಿಸಿತು. ರೇಡಿಂಗ್‌ನಲ್ಲಿ ಮಿಂಚಿದ ಮಹೇಶ್‌ ಎಂ. ಮುಂಬೈ ತಂಡಕ್ಕೆ ಭರ್ಜರಿ ಗೆಲುವಿನ ಉಡುಗೊರೆ ನೀಡಿದರು.

ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಆರಂಭದಲ್ಲೇ ಉಭಯ ತಂಡಗಳು ಬಿರುಸಿನ ಆಟಕ್ಕಿಳಿದವು. ಹರಿಯಾಣ ತಂಡದ ಸತ್ನಾಮ್‌ ಸಿಂಗ್‌ ಪ್ರಥಮ ಕ್ವಾರ್ಟರ್‌ನಲ್ಲಿ ಸೊಗಸಾದ ರೇಡಿಂಗ್‌ ಮೂಲಕ ತಂಡ ಮೇಲುಗೈ ಸಾಧಿಸುವಂತೆ ನೋಡಿಕೊಂಡರು. ಪ್ರಥಮ ಕ್ವಾರ್ಟರ್‌ ಮುಕ್ತಾಯದ ವೇಳೆಗೆ‌ಹರಿಯಾಣ ತಂಡ 17–16ರ ಮುನ್ನಡೆ ಸಾಧಿಸಿತು.

ಬಳಿಕ ಉಭಯ ತಂಡಗಳ ಆಟಗಾರರು ಬಿರುಸಿನ ಆಟಕ್ಕೆ ಒತ್ತು ನೀಡಿದರು. ಎರಡನೇ ಕ್ವಾರ್ಟರ್‌ನಲ್ಲಿ ಮುಂಬೈ ತಂಡದ ಮಹೇಶ್‌. ಎಂ. ರೇಡಿಂಗ್‌ನಲ್ಲಿ ಆಕ್ರಮಣಕಾರಿಯಾಗಿ ಕಂಡುಬಂದರು. ಒಟ್ಟು 18 ಪಾಯಿಂಟ್‌ ಗಳಿಸಿದ ಅವರು, ಮುಗ್ಗರಿಸುವ ಹಂತದಲ್ಲಿದ್ದ ತಂಡವನ್ನು ಮೇಲೆತ್ತಿದರು. ಮೂರನೇ ಕ್ವಾರ್ಟರ್‌ ನಂತರ ಮುಂಬೈ ತಂಡ ಮುನ್ನಡೆಯನ್ನು ಹೆಚ್ಚಿಸುತ್ತಲೇ ಸಾಗಿತು. ಅಂತಿಮವಾಗಿ ಭರ್ಜರಿ ಜಯ ಸಾಧಿಸಿತು.

ADVERTISEMENT

ಮಹೇಶ್‌ ಅವರಿಗೆ ಪಂದ್ಯದ ಉತ್ತಮ ರೇಡರ್‌ ಹಾಗೂ ಉತ್ತಮ ಆಟಗಾರ ಪ್ರಶಸ್ತಿ ಲಭಿಸಿತು.

ಹರಿಯಾಣ ಪರ ಸತ್ನಾಮ್‌ ಸಿಂಗ್‌ ಒಟ್ಟು 13 ಪಾಯಿಂಟ್‌ ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ಸಂಘಟಿತವಾಗಿ ಆಡುವಲ್ಲಿ ಹೀರೋಸ್‌ ವಿಫಲವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.