ADVERTISEMENT

ಜೂನಿಯರ್‌ ಮಹಿಳೆಯರ ಹಾಕಿ ವಿಶ್ವಕಪ್‌: ಭಾರತ ಶುಭಾರಂಭ

ಪಿಟಿಐ
Published 2 ಡಿಸೆಂಬರ್ 2025, 0:16 IST
Last Updated 2 ಡಿಸೆಂಬರ್ 2025, 0:16 IST
ಭಾರತ (ಬಲ) ಮತ್ತು ನಮೀಬಿಯಾ ತಂಡದ ಆಟಗಾರ್ತಿಯರ ಸೆಣಸಾಟ –ಎಕ್ಸ್ ಚಿತ್ರ
ಭಾರತ (ಬಲ) ಮತ್ತು ನಮೀಬಿಯಾ ತಂಡದ ಆಟಗಾರ್ತಿಯರ ಸೆಣಸಾಟ –ಎಕ್ಸ್ ಚಿತ್ರ   

ಸ್ಯಾಂಟಿಯಾಗೊ (ಚಿಲಿ)  ಹಿನಾ ಬಾನೊ ಮತ್ತು ಕನಿಕಾ ಸಿವಾಚ್ ಅವರ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ಭಾರತ ತಂಡವು ಸೋಮವಾರ ಎಫ್‌ಐಎಚ್‌ ಜೂನಿಯರ್ ಮಹಿಳೆಯರ ಹಾಕಿ ವಿಶ್ವಕಪ್‌ನಲ್ಲಿ 13–0ಯಿಂದ ನಮೀಬಿಯಾ ತಂಡವನ್ನು ಮಣಿಸಿ ತನ್ನ ಅಭಿಯಾನ ಆರಂಭಿಸಿತು.

ಭಾರತದ ಹಿನಾ (35ನೇ, 35ನೇ, 45ನೇ) ಮತ್ತು ಕನಿಕಾ (12ನೇ, 30ನೇ, 45ನೇ) ತಲಾ ಮೂರು ಗೋಲು ಗಳಿಸಿದರೆ, ಸಾಕ್ಷಿ ರಾಣಾ (10ನೇ, 23ನೇ) ತಲಾ ಎರಡು ಗೋಲು ದಾಖಲಿಸಿದರು. ಬಿನಿಮಾ ಧನ್ (14ನೇ), ಸೋನಮ್ (14ನೇ), ಸಾಕ್ಷಿ ಶುಕ್ಲಾ (27ನೇ), ಇಶಿಕಾ (36ನೇ), ಮತ್ತು ಮನೀಷಾ (60ನೇ) ತಲಾ ಒಂದೊಂದು ಬಾರಿ ಚೆಂಡನ್ನು ಗುರಿ ಸೇರಿಸಿದರು.

ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕಿಳಿದ ಭಾರತದ ವನಿತೆಯರು ಮೊದಲ ಕ್ವಾರ್ಟರ್‌ನಲ್ಲೇ 4–0 ಮುನ್ನಡೆಯೊಂದಿಗೆ ಉತ್ತಮ ಆರಂಭ ಪಡೆದರು. ಮಧ್ಯಂತರದ ವೇಳೆಗೆ ಮುನ್ನಡೆಯನ್ನು 7–0 ವಿಸ್ತರಿಸಿದ ಭಾರತ ಉತ್ತರಾರ್ಧದಲ್ಲೂ ಪಾರಮ್ಯ ಮೆರೆಯಿತು. ಮೂರನೇ ಕ್ವಾರ್ಟರ್‌ನಲ್ಲಿ ಭಾರತದ ಪರ ಮತ್ತೆ ಐದು ಗೋಲುಗಳು ದಾಖಲಾದವು. ಕೊನೆಯ ಕ್ವಾರ್ಟರ್‌ನಲ್ಲಿ ಉಭಯ ತಂಡಗಳ ಆಟಗಾರ್ತಿಯರು ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. ಕೊನೆಯ ನಿಮಿಷದಲ್ಲಿ ಮನೀಷಾ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಗೋಲು ದಾಖಲಿಸಿ, ಭಾರತದ ಗೆಲುವಿನ ಅಂತರವನ್ನು ಹೆಚ್ಚಿಸಿದರು.

ADVERTISEMENT

ಇದಕ್ಕೂ ಮುನ್ನ ನಡೆದ ಮತ್ತೊಂದು ಪಂದ್ಯದಲ್ಲಿ ಜರ್ಮನಿ 7–1ರಿಂದ ಐರ್ಲೆಂಡ್‌ ತಂಡವನ್ನು ಮಣಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.