ಲಿಮಾ: ಭಾರತದ ಶೂಟರ್‌ಗಳು ಐಎಸ್‌ಎಸ್‌ಎಫ್ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರವೂ ಪಾರಮ್ಯ ಮುಂದುವರಿಸಿದರು. ಅನೀಷ್ ಭಾನ್ವಾಲಾ, ಆದರ್ಶ್ ಸಿಂಗ್ ಮತ್ತು ವಿಜಯವೀರ್ ಸಿಧು ಅವರನ್ನು ಒಳಗೊಂಡ ತಂಡ 25 ಮೀಟರ್ಸ್ ರ‍್ಯಾಪಿಡ್ ಫೈರ್ ಪಿಸ್ತೂಲು ವಿಭಾಗದಲ್ಲಿ ಚಿನ್ನ ಗೆದ್ದುಕೊಂಡಿತು. ಇದರೊಂದಿಗೆ ಭಾರತ ಪಾಯಿಂಟ್ ಪಟ್ಟಿಯ ಅಗ್ರಸ್ಥಾನಕ್ಕೇರಿತು.
ಭಾರತದ ಶೂಟರ್‌ಗಳು ಜರ್ಮನಿಯ ಫ್ಯಾಬಿಯನ್ ಒಟೊ, ಫೆಲಿಕ್ಸ್ ಲೂಕಾ ಹೊಲ್‌ಫೊತ್ ಮತ್ತು ತೊಬಿಯಾಸ್ ಸೊಯೆಲ್ ಎದುರು ಜಯ ಗಳಿಸಿದರು. ಮಾನ್ವಿ ಸೋನಿ ಅವರು ಜೂನಿಯರ್ ಡಬಲ್ ಟ್ರ್ಯಾಪ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡರು. ಭಾರತದ ಯೆಶಾಯ ಹಫೀಜ್ ಕಾಂಟ್ರಾಕ್ಟರ್ ವಿರುದ್ಧ ಅವರು ಫೈನಲ್‌ನಲ್ಲಿ ಜಯ ಗಳಿಸಿದರು. ಕಂಚಿನ ಪದಕ ಭಾರತದ ಹಿತಾಶ ಅವರ ಪಾಲಾಯಿತು.
ವಿನಯ ಪ್ರತಾಪ್ ಸಿಂಗ್ ಚಂದ್ರಾವತ್ 120 ಸ್ಕೋರು ಕಲೆ ಹಾಕಿ ಪುರುಷರ ಡಬಲ್ಸ್ ಟ್ರ್ಯಾಪ್ ಸ್ಪರ್ಧೆಯಲ್ಲಿ ಚಿನ್ನಕ್ಕೆ ಗುರಿ ಇಟ್ಟರು. 114 ಸ್ಕೋರು ಗಳಿಸಿದ ಸಹಜ್‌ಪ್ರೀತ್ ಸಿಂಗ್ ಬೆಳ್ಳಿ ಗಳಿಸಿದರೆ ಮಯಂಕ್ ಶೊಕೀನ್ ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.