ADVERTISEMENT

ತಸ್ನಿಂ, ವರುಣ್‌ ಆಕರ್ಷಣೆ

ನಾಳೆಯಿಂದ ಏಷ್ಯನ್‌ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌

ಪಿಟಿಐ
Published 11 ಡಿಸೆಂಬರ್ 2019, 10:18 IST
Last Updated 11 ಡಿಸೆಂಬರ್ 2019, 10:18 IST
ತಸ್ನಿಂ ಮಿರ್‌(ಎಡ)
ತಸ್ನಿಂ ಮಿರ್‌(ಎಡ)   

ಸರಬಯಾ, ಇಂಡೊನೇಷ್ಯಾ : 17 ಹಾಗೂ 15 ವರ್ಷದೊಳಗಿನವರ ಏಷ್ಯನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಬುಧವಾರ ಆರಂಭಗೊಳ್ಳಲಿದ್ದು,ಭಾರತದ ಯುವ ಆಟಗಾರರು ಉತ್ತಮ ಸಾಮರ್ಥ್ಯ ತೋರುವ ನಿರೀಕ್ಷೆಯಲ್ಲಿದ್ದಾರೆ.

ಹೋದ ವರ್ಷ ಮ್ಯಾನ್ಮಾರ್‌ನಲ್ಲಿ ನಡೆದ ಟೂರ್ನಿಯಲ್ಲಿ ಭಾರತಕ್ಕೆ ಒಂದು ಚಿನ್ನದ ಪದಕ ಒಲಿದಿತ್ತು. ಗುಜರಾತ್‌ನ ತಸ್ನಿಂ ಮಿರ್‌– ತೆಲಂಗಾಣದ ಮೇಘನಾ ರೆಡ್ಡಿ ಜೋಡಿಯು 15 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್‌ ಆಗಿದ್ದರು.

ತಸ್ನಿಂ ಮಿರ್ ಅವರಿಗೆ15 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಅಗ್ರ ಶ್ರೇಯಾಂಕ ದೊರೆತಿದೆ. ಐದು ದಿನಗಳವರೆಗೆ ಟೂರ್ನಿ ನಡೆಯಲಿದೆ.

ADVERTISEMENT

ಮಹಾರಾಷ್ಟ್ರದ ವರುಣ್ ಕಪೂರ್‌ ಮತ್ತು ಅಸ್ಸಾಂನ ತನ್ಮಯ್‌ ಬೋರಾ ಅವರು ಕ್ರಮವಾಗಿ 17 ವರ್ಷದೊಳಗಿನವರು ಹಾಗೂ 15 ವರ್ಷದೊಳಗಿನವರ ಬಾಲಕರ ಸಿಂಗಲ್ಸ್ ವಿಭಾಗಗಳಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದಾರೆ.

17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಭಾರತದ ನಂ.1 ಆಟಗಾರನಾಗಿರುವ ಪ್ರಣವ್‌ ರಾವ್‌ ಗಂಧಮ್‌, ಬಾಲಕಿಯರ ವಿಭಾಗದಲ್ಲಿ ಅಗ್ರಸ್ಥಾನದಲ್ಲಿರುವ ಮಾನಸಿ ಸಿಂಗ್‌ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.