ADVERTISEMENT

4 ರಾಷ್ಟ್ರಗಳ ಹಾಕಿ: ಜರ್ಮನಿಗೆ ಮಣಿದ ಭಾರತ

ಪಿಟಿಐ
Published 21 ಜೂನ್ 2025, 16:33 IST
Last Updated 21 ಜೂನ್ 2025, 16:33 IST
ಹಾಕಿ
ಹಾಕಿ   

ಬರ್ಲಿನ್‌: ಭಾರತ ಜೂನಿಯರ್ ಹಾಕಿ ತಂಡವು ಶನಿವಾರ ನಡೆದ ನಾಲ್ಕು ರಾಷ್ಟ್ರಗಳ ಹಾಕಿ ಟೂರ್ನಿಯ ಮೊದಲ ಪಂದ್ಯದಲ್ಲಿ ಜರ್ಮನಿ ಎದುರು 1–7 ಗೋಲುಗಳಿಂದ ಸೋಲನುಭವಿಸಿತು. ಆ ಮೂಲಕ ಟೂರ್ನಿಯಲ್ಲಿ ನಿರಾಶಾದಾಯಕ ಆರಂಭ ಪಡೆಯಿತು.

ಹಾಸ್ಬಾಕ್‌ ಬೆನ್‌ ಹ್ಯಾಟ್ರಿಕ್‌ (25, 51 ಮತ್ತು 54ನೇ ನಿಮಿಷ) ಗೋಲುಗಳನ್ನು ಬಾರಿಸಿ ಆತಿಥೇಯ ತಂಡದ ಗೆಲುವಿನಲ್ಲಿ ಮಿಂಚಿದರು.  ನಿಕೊ ಕಿಸ್ಟಿನ್‌ (4ನೇ ನಿಮಿಷ), ಅಲೆಕ್‌ ವಾನ್ ಶ್ವೆರಿನ್‌ (5ನೇ ನಿಮಿಷ) ಮತ್ತು ಪಾಲ್‌ ಬೆಬಿಕ್ (39ನೇ ನಿಮಿಷ) ಉಳಿದ ಗೋಲುಗಳನ್ನು ಗಳಿಸಿದರು.

ಆನಂದ್ ಕುಶ್ವಾಹ (50ನೇ ನಿಮಿಷ) ಭಾರತ ಜೂನಿಯರ್ ತಂಡದ ಏಕೈಕ ಗೋಲನ್ನು ಗಳಿಸಿದರು.

ADVERTISEMENT

ಭಾರತ ತನ್ನ ಮುಂದಿನ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಭಾನುವಾರ ಆಡಲಿದೆ. ಇದರ ನಂತರ ಮಂಗಳವಾರ ಸ್ಪೇನ್ ತಂಡವನ್ನು ಎದುರಿಸಲಿದೆ. ರೌಂಡ್‌ ರಾಬಿನ್ ಲೀಗ್ ನಂತರ ಮೊದಲ ಎರಡು ಸ್ಥಾನ ಪಡೆದ ತಂಡಗಳು ಫೈನಲ್‌ ಆಡಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.