ನವದೆಹಲಿ: ಭಾರತವು 2030ರ ಕಾಮನ್‌ವೆಲ್ತ್ ಕ್ರೀಡೆಗಳ ಆತಿಥ್ಯ ವಹಿಸಲು ‘ಆಸಕ್ತ’ವಾಗಿದೆ. ಮಾತ್ರವಲ್ಲ, 2026ರ (ಗ್ಲಾಸ್ಗೊ) ಕ್ರೀಡೆಗಳಿಂದ ಹೊರಗಿಡಲಾಗಿರುವ ಆಟಗಳನ್ನೂ ಸೇರಿಸಿ ಪದಕ ಪಟ್ಟಿಯ ಮೇಲೆ ಪರಿಣಾಮವಾಗದಂತೆ ನೋಡಿಕೊಳ್ಳಲಾಗುವುದು ಎಂದು ಕ್ರೀಡಾ ಸಚಿವಾಲಯದ ಮೂಲವೊಂದು ಶುಕ್ರವಾರ ತಿಳಿಸಿದೆ.
‘ನಾವು ಈ ಕ್ರೀಡೆಗಳ ಆತಿಥ್ಯ ವಹಿಸಲು ಉತ್ಸುಕರಾಗಿದ್ದೇವೆ. ಈ ಬಗ್ಗೆ ಕಾಮನ್‌ವೆಲ್ತ್ ಗೇಮ್ಸ್ ಫೆಡರೇಷನ್ ಜೊತೆ ಔಪಚಾರಿಕ ಮಾತುಕತೆಯೂ ನಡೆದಿದೆ. 2026ರ ಕ್ರೀಡೆಗಳಿಂದ ಹೊರಗಿಡಲಾದ ಕೆಲವು ಕ್ರೀಡೆಗಳನ್ನೂ, ನಡೆಸಲೂ ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದು ಈ ಮೂಲ ತಿಳಿಸಿದೆ.
2026ರ ಜುಲೈ 23 ರಿಂದ ಆಗಸ್ಟ್ 2 ರವರೆಗೆ ನಡೆಯುವ ಕ್ರೀಡೆಗಳಿಂದ ಹಾಕಿ, ಬ್ಯಾಡ್ಮಿಂಟನ್, ಕುಸ್ತಿ, ಕ್ರಿಕೆಟ್, ಶೂಟಿಂಗ್ ಆಟಗಳನ್ನು ಹೊರಗಿಟ್ಟಿರುವುದು ಭಾರತದ ಪದಕ ಗಳಿಕೆಗೆ ಹಿನ್ನಡೆ ತರುವ ಸಾಧ್ಯತೆಯಿದೆ. ಕ್ರೀಡೆಗಳನ್ನು ಮಿತವ್ಯಯಿಗೊಳಿಸುವ ಉದ್ದೇಶದಿಂದ ಈ ರೀತಿ ಕೆಲವು ಆಟಗಳಿಂದ ಕೊಕ್ ನೀಡಲಾಗಿದೆ ಎಂದು ಆಯೋಜಕರು ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.