
ಭಾರತದ ಅನಾಹತ್ ಸಿಂಗ್ (ಎಡ) ಆಟದ ವೈಖರಿ
–ಪಿಟಿಐ ಚಿತ್ರ
ಚೆನ್ನೈ : ಎರಡು ಬಾರಿಯ ಚಾಂಪಿಯನ್ ಈಜಿಪ್ಟ್ ತಂಡವನ್ನು ಮಣಿಸಿದ ಆತಿಥೇಯ ಭಾರತ ತಂಡವು ಚೊಚ್ಚಲ ಬಾರಿಗೆ ಸ್ಕ್ವಾಷ್ ವಿಶ್ವಕಪ್ ಫೈನಲ್ ಪ್ರವೇಶಿಸಿತು.
ಎರಡನೇ ಶ್ರೇಯಾಂಕದ ಭಾರತ ತಂಡ, ಇಲ್ಲಿನ ಎಕ್ಸ್‌ಪ್ರೆಸ್ ಅವೆನ್ಯೂ ಮಾಲ್‌ನಲ್ಲಿ ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ 3–0ಯಿಂದ ಹಾಲಿ ಚಾಂಪಿಯನ್ ಈಜಿಪ್ಟ್ ತಂಡವನ್ನು ಸೋಲಿಸಿತು.
ಆತಿಥೇಯ ತಂಡದ ವಿ.ಸೆಂಥಿಲ್‌ಕುಮಾರ್ 3–0ಯಿಂದ ಇಬ್ರಾಹಿಂ ಎಲ್ಕಬ್ಬನಿ ಅವರನ್ನು ಸುಲಭವಾಗಿ ಮಣಿಸಿದರು. ಉದಯೋನ್ಮುಖ ಆಟಗಾರ್ತಿ ಅನಾಹತ್ ಸಿಂಗ್ ಅವರು 3–2ರಿಂದ ನೂರ್ ಹೈಕಲ್ ವಿರುದ್ಧ ರೋಚಕ ಗೆಲುವು ಸಾಧಿಸಿದರೆ, ಅಭಯ್‌ಸಿಂಗ್ 3–1ರಿಂದ ಆ್ಯಡಂ ಹವಾಲ್ ಅವರನ್ನು ಸೋಲಿಸಿದರು.
ಭಾರತ ತಂಡವು ಭಾನುವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಹಾಂಗ್‌ಕಾಂಗ್ ತಂಡವನ್ನು ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.