ADVERTISEMENT

ಭಾರತ ಪುರುಷರ ಹಾಕಿ: ಹರ್ಮನ್‌ಪ್ರೀತ್ ಸಿಂಗ್ ಮಿಂಚು

ಪಿಟಿಐ
Published 12 ಡಿಸೆಂಬರ್ 2025, 14:31 IST
Last Updated 12 ಡಿಸೆಂಬರ್ 2025, 14:31 IST
<div class="paragraphs"><p>ನಾಯಕ ಹರ್ಮನ್‌ಪ್ರೀತ್ ಸಿಂಗ್</p></div>

ನಾಯಕ ಹರ್ಮನ್‌ಪ್ರೀತ್ ಸಿಂಗ್

   

ಸ್ಟೆಲನ್‌ಬೋಶ್ (ದಕ್ಷಿಣ ಆಫ್ರಿಕಾ): ಭಾರತ ಪುರುಷರ ಹಾಕಿ ತಂಡವು ಎರಡು ಟೆಸ್ಟ್ ಮತ್ತು ಒಂದು ಸೌಹಾರ್ದ ಪಂದ್ಯವನ್ನು ಒಳಗೊಂಡ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಅಜೇಯವಾಗಿ ಮುಗಿಸಿತು.

ಬುಧವಾರ ನಡೆದ ಸೌಹಾರ್ದ ಪಂದ್ಯದಲ್ಲಿ ಸುಖ್‌ಜೀತ್ ಸಿಂಗ್, ಅಮಿತ್ ರೋಹಿದಾಸ್, ಹಾರ್ದಿಕ್ ಸಿಂಗ್ ಮತ್ತು ಮನ್‌ದೀಪ್ ಸಿಂಗ್ ಅವರ ಗೋಲುಗಳ ನೆರವಿನಿಂದ ಪ್ರವಾಸಿ ತಂಡವು 4-1ರಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿ ಪ್ರವಾಸವನ್ನು ಮುಕ್ತಾಯಗೊಳಿಸಿತು.

ADVERTISEMENT

ಭಾರತ ತಂಡವು ಭಾನುವಾರ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ  5-2 ಗೋಲುಗಳ ಗೆಲುವಿನೊಂದಿಗೆ ಶುಭಾರಂಭ ಮಾಡಿತ್ತು. ಸೋಮವಾರ ನಡೆದ ಎರಡನೇ ಟೆಸ್ಟ್‌ನಲ್ಲಿ ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರ ಎರಡು ಗೋಲುಗಳ ನೆರವಿನಿಂದ 2-2ರಿಂದ ಡ್ರಾ ಸಾಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.