ADVERTISEMENT

ಚೆಸ್‌: ಭಾರತ–ರಷ್ಯಾ ಜಂಟಿ ವಿಜೇತರು

ಪಿಟಿಐ
Published 30 ಆಗಸ್ಟ್ 2020, 19:36 IST
Last Updated 30 ಆಗಸ್ಟ್ 2020, 19:36 IST
ಚೆಸ್
ಚೆಸ್   

ಚೆನ್ನೈ: ಇಂಟರ್‌ನೆಟ್ ಕೈಕೊಟ್ಟು, ಸರ್ವರ್‌ನಲ್ಲಿ ದೋಷ ಕಂಡು ಬಂದು ಫೈನಲ್ ಪಂದ್ಯಕ್ಕೆ ಅಡ್ಡಿಯಾದ ಕಾರಣ ಭಾರತ ಮತ್ತು ರಷ್ಯಾ ತಂಡಗಳನ್ನು ಆನ್‌ಲೈನ್ ಚೆಸ್ ಒಲಿಂಪಿಯಾಡ್‌ನ ಜಂಟಿ ವಿಜೇತರನ್ನಾಗಿ ಘೋಷಿಸಲಾಯಿತು.

ಫೈನಲ್‌ ಪಂದ್ಯದ ವೇಳೆ ಸರ್ವರ್‌ ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ. ಇಂಥ ಸ್ಥಿತಿಯಲ್ಲಿ ಭಾರತದ ನಿಹಾಲ್ ಸರೀನ್ ಮತ್ತು ದಿವ್ಯಾ ದೇಶ್‌ಮುಖ್ ಅವರ ಸೋಲಿನೊಂದಿಗೆ ರಷ್ಯಾವನ್ನು ವಿಜೇತ ತಂಡ ಎಂದು ಘೋಷಿಸಲಾಗಿತ್ತು. ಭಾರತ ಇದರ ವಿರುದ್ಧ ದೂರು ದಾಖಲಿಸಿತು. ಹೀಗಾಗಿ ತೀರ್ಪು ಮರುಪರಿಶೀಲಿಸಲಾಯಿತು.

‘ಭಾರತ ಸೇರಿದಂತೆ ಜಗತ್ತಿನ ವಿವಿಧ ದೇಶಗಳಲ್ಲಿ ಭಾನುವಾರ ಇಂಟರ್‌ನೆಟ್ ಸಮಸ್ಯೆ ಕಂಡುಬಂದಿತ್ತು. ಹೀಗಾಗಿ ತೀರ್ಪನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಯಿತು’ ಎಂದು ಫಿಡೆ ಅಧ್ಯಕ್ಷ ಆರ್ಕಡಿ ಡೊರ್ಕೊವಿಚ್ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.