ADVERTISEMENT

ಮಹಿಳಾ ಏಷ್ಯಾ ಕಪ್ ಹಾಕಿ: ಭಾರತಕ್ಕೆ ಥಾಯ್ಲೆಂಡ್ ಮೊದಲ ಎದುರಾಳಿ

ಪಿಟಿಐ
Published 4 ಜೂನ್ 2025, 13:35 IST
Last Updated 4 ಜೂನ್ 2025, 13:35 IST
   

ನವದೆಹಲಿ: ಭಾರತ ಮಹಿಳಾ ಹಾಕಿ ತಂಡವು ಏಷ್ಯಾ ಕಪ್‌ ಟೂರ್ನಿಯಲ್ಲಿ ಸೆಪ್ಟೆಂಬರ್‌ 5ರಂದು ಥಾಯ್ಲೆಂಡ್‌ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ ಎಂದು ಹಾಕಿ ಇಂಡಿಯಾ ಬುಧವಾರ ಪ್ರಕಟಿಸಿದೆ. ಟೂರ್ನಿಯು ಚೀನಾದ ಹಾಂಗ್‌ಝೌನಲ್ಲಿ ಸೆಪ್ಟೆಂಬರ್‌ 5 ರಿಂದ 14 ರವರೆಗೆ ನಡೆಯಲಿದೆ.

ಭಾರತ ತಂಡವು ‘ಬಿ’ ಗುಂಪಿನಲ್ಲಿದ್ದು, ಥಾಯ್ಲೆಂಡ್‌, ಜಪಾನ್‌, ಥಾಯ್ಲೆಂಡ್‌, ಸಿಂಗಪುರ ಸಹ ಇದೇ ಗುಂಪಿನಲ್ಲಿವೆ. ಆತಿಥೇಯ ಚೀನಾ, ಕೊರಿಯಾ, ಮಲೇಷ್ಯಾ ಮತ್ತು ಚೀನಾ ತೈಪೆ ತಂಡಗಳು ‘ಎ’ ಗುಂಪಿನಲ್ಲಿವೆ. ಈ ಟೂರ್ನಿಯಲ್ಲಿ ಗೆದ್ದ ತಂಡವು 2026ರ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲಿದೆ.

ಭಾರತ ಸೆ. 6ರಂದು ಜಪಾನ್‌ ತಂಡವನ್ನು ಎದುರಿಸಲಿದ್ದು, 8ರಂದು ಕೊನೆಯ ಲೀಗ್‌ ಪಂದ್ಯದಲ್ಲಿ ಸಿಂಗಪುರ ವಿರುದ್ಧ ಆಡಲಿದೆ.

ADVERTISEMENT

‘ಹಾಲಿ ಚಾಂಪಿಯನ್ ಜಪಾನ್‌ ಸಹ ಬಿ ಗುಂಪಿನಲ್ಲಿದ್ದು, ನಮ್ಮ ಕೌಶಲ ಮತ್ತು ಸಿದ್ಧತೆ ಆರಂಭದಿಂದಲೇ ಪರೀಕ್ಷೆಗೆ ಒಳಗಾಗಲಿದೆ. ಆದರೆ ಟೂರ್ನಿಯ ಆರಂಭದಲ್ಲೇ ಜಪಾನ್ ತಂಡವನ್ನು ಎದುರಿಸುತ್ತಿರುವುದು ನಮ್ಮ ಮೌಲ್ಯಮಾಪನಕ್ಕೆ ಅವಕಾಶವಾಗಲಿದೆ’ ಎಂದು ಭಾರತ ತಂಡದ ನಾಯಕಿ ಸಲಿಮಾ ಟೆಟೆ ಹೇಳಿದರು.

‘ನಮ್ಮ ಗುರಿ ಜಾಣ್ಮೆ, ಶಿಸ್ತುಬದ್ಧ ಆಟವಾಡುವುದು. ಅಂತಿಮ ಗುರಿಯಿರುವುದು ಟ್ರೋಫಿ ಗೆದ್ದು 2026ರ ಎಫ್‌ಐಎಚ್‌ ಮಹಿಳಾ ವಿಶ್ವಕಪ್‌ ಹಾಕಿ ಗೆಲ್ಲುವುದು’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.