ADVERTISEMENT

ಏಷ್ಯನ್‌ 20 ವರ್ಷದೊಳಗಿನವರ ಅಥ್ಲೆಟಿಕ್ಸ್‌ ಚಾಂಪಿಯನ್‌ ಷಿಪ್‌: ಭಾರತಕ್ಕೆ ಎರಡು ಚಿನ್ನ

ಪಿಟಿಐ
Published 4 ಜೂನ್ 2023, 15:49 IST
Last Updated 4 ಜೂನ್ 2023, 15:49 IST

ಯೆಚೊಯಾನ್‌: ಭಾರತದ ರೆಜೋನಾ ಮಲ್ಲಿಕ್ ಹೀನಾ ಮತ್ತು ಭರತ್‌ಪ್ರೀತ್‌ ಸಿಂಗ್‌ ಇಲ್ಲಿ ಆರಂಭಗೊಂಡ ಏಷ್ಯನ್ 20 ವರ್ಷದೊಳಗಿನವರ  ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಮಹಿಳೆಯರ 200 ಮೀ. ಓಟ ಮತ್ತು ಪುರುಷರ ಡಿಸ್ಕಸ್‌ ಥ್ರೋನಲ್ಲಿ ಭಾರತಕ್ಕೆ ಚಿನ್ನದ ಪದಕ ಗಳಿಸಿಕೊಟ್ಟರು.

ರೆಜೋನಾ ಮಲ್ಲಿಕ್ ಹೀನಾ ನಿಗದಿತ ಗುರಿಯನ್ನು 53.31 ಸೆಕೆಂಡ್‌ಗಳಲ್ಲಿ ತಲುಪಿ, ಭಾರತಕ್ಕೆ ಮೊದಲ ಪದಕ ಕಾಣಿಕೆ ಕೊಟ್ಟರು.  ಅವರು ಏಪ್ರಿಲ್‌ನಲ್ಲಿ ನಡೆದ ಏಷ್ಯನ್ 18 ವರ್ಷದೊಳಗಿನವರ ಅಥ್ಲೆಟಿಕ್ಸ್‌ ಚಾಂಪಿಯನ್‌ ಷಿಪ್‌ನ ಇದೇ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು.

ಭರತ್‌ಪ್ರೀತ್‌ ಸಿಂಗ್‌ 55.66 ಮೀಟರ್‌ ಡಿಸ್ಕಸ್‌ ಎಸೆಯುವ ಮೂಲಕ ಭಾರತಕ್ಕೆ ಎರಡನೇ ಚಿನ್ನದ ಪದಕವನ್ನು ತಂದುಕೊಟ್ಟರು. ಮಹಿಳೆಯರ 5 ಸಾವಿರ ಮೀಟರ್‌ ಓಟದ ಸ್ಪರ್ಧೆಯಲ್ಲಿ ಅಂತಿಮಾ ಪಾಲ್‌ ಕಂಚಿನ ಪಡೆದರು. ಅವರು 17ನಿಮಿಷ, 17.11 ಸೆಕೆಂಡ್‌ನಲ್ಲಿ ನಿಗದಿತ ಗುರಿ ತಲುಪಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.