ADVERTISEMENT

Asian Athletics Championships: ಒಂದೇ ದಿನ ಭಾರತಕ್ಕೆ ಮೂರು ಚಿನ್ನ

ಪಿಟಿಐ
Published 13 ಜುಲೈ 2023, 12:58 IST
Last Updated 13 ಜುಲೈ 2023, 12:58 IST
ಅಬ್ದುಲ್ಲಾ ಅಬೂಬಕ್ಕರ್
ಅಬ್ದುಲ್ಲಾ ಅಬೂಬಕ್ಕರ್   

ಬ್ಯಾಂಕಾಕ್: ಥಾಯ್ಲೆಂಡ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ದಿನವಾದ ಗುರುವಾರ ಭಾರತೀಯ ಅಥ್ಲೀಟ್‌ಗಳು ಮೂರು ಚಿನ್ನದ ಪದಕಗಳನ್ನು ಜಯಿಸಿದ್ದಾರೆ.

ಮಹಿಳೆಯರ 100 ಮೀ. ಹರ್ಡಲ್ಸ್‌ನಲ್ಲಿ ಜ್ಯೋತಿ ಯೆರ‍್ರಾಜಿ, ಪುರುಷರ 1500 ಮೀ. ಓಟದಲ್ಲಿ ಅಜಯ್ ಕುಮಾರ್ ಸರೋಜ್ ಮತ್ತು ಪುರುಷರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಅಬ್ದುಲ್ಲಾ ಅಬೂಬಕ್ಕರ್ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

ಮಹಿಳೆಯರ 400 ಮಿ.ನಲ್ಲಿ ಭಾರತದ ಓಟಗಾರ್ತಿ ಐಶ್ವರ್ಯಾ ಮಿಶ್ರಾ (53.07 ಸೆಕೆಂಡು) ಕಂಚಿನ ಪದಕ ಜಯಿಸಿದ್ದಾರೆ.

ADVERTISEMENT

ಹರ್ಡಲ್ಸ್‌ನಲ್ಲಿ 23 ವರ್ಷದ ಜ್ಯೋತಿ ಯೆರ‍್ರಾಜಿ 13.09 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದರು.

ಮತ್ತೊಂದೆಡೆ 1,500 ಮೀ. ಓಟದಲ್ಲಿ 26 ವರ್ಷದ ಸರೋಜ್ (3:41.51) ಏಷ್ಯನ್ ಅಥ್ಲೇಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಸತತ ಮೂರನೇ ಬಾರಿಗೆ ಪದಕ ಗೆದ್ದ ಸಾಧನೆ ಮಾಡಿದ್ದಾರೆ. 2017ರಲ್ಲಿ ಚಿನ್ನ (ಭುವನೇಶ್ವರ) ಮತ್ತು 2019ರಲ್ಲಿ ಬೆಳ್ಳಿ (ದೋಹಾ) ಪದಕ ಗೆದ್ದಿದ್ದರು.

ಟ್ರಿಪಲ್ ಜಂಪ್‌ನಲ್ಲಿ 27 ವರ್ಷದ ಅಬೂಬಕ್ಕರ್, 16.92 ಮೀ. ಜಿಗಿಯುವ ಮೂಲಕ ಸ್ವರ್ಣ ಪದಕಕ್ಕೆ ಕೊರಳೊಡ್ಡಿದ್ದಾರೆ.

ಕ್ರೀಡಾಕೂಟದ ಮೊದಲ ದಿನ ಬುಧವಾರದಂದು ಭಾರತದ ಅಭಿಷೇಕ್ ಪಾಲ್, ಪುರುಷರ 10,000 ಮೀ. ನಡಿಗೆ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.