ADVERTISEMENT

ಆನ್‌ಲೈನ್‌ ಚೆಸ್‌: ಕ್ವಾರ್ಟರ್‌ಫೈನಲ್‌ಗೆ ಭಾರತ ತಂಡ

ಪಿಟಿಐ
Published 19 ಅಕ್ಟೋಬರ್ 2020, 14:09 IST
Last Updated 19 ಅಕ್ಟೋಬರ್ 2020, 14:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚೆನ್ನೈ: ಭಾರತ ತಂಡದ ಆಟಗಾರ್ತಿಯರು ಏಷ್ಯನ್ ನೇಷನ್ಸ್ ಕಪ್‌ ಆನ್‌ಲೈನ್‌ ಚೆಸ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಪಡೆದಿರುವ ಭಾರತ ತಂಡ, ಸ್ವಿಸ್‌ ವಿಧಾನದ ಪ್ರಿಲಿಮನರಿ ಹಂತದಲ್ಲಿ ಅಗ್ರಸ್ಥಾನ ಗಳಿಸಿತು.

ಎಂಟರಘಟ್ಟದ ಹಣಾಹಣಿಯಲ್ಲಿ ಭಾರತದ ಆಟಗಾರ್ತಿಯರು ಕಿರ್ಗಿಸ್ತಾನ ತಂಡವನ್ನು ಎದುರಿಸಲಿದ್ದಾರೆ. ಪ್ರಿಲಿಮನರಿ ಹಂತದಲ್ಲಿ 16 ಪಾಯಿಂಟ್ಸ್‌ ಕಲೆಹಾಕಿದ ಭಾರತ ತಂಡ, ಫಿಲಿಪ್ಪೀನ್ಸ್ (13) ಹಾಗೂ ಇರಾನ್‌ (13) ತಂಡಗಳನ್ನು ಹಿಂದಿಕ್ಕಿತು.

ಏಳನೇ ಸುತ್ತಿನ ಹಣಾಹಣಿಯಲ್ಲಿ 3–1ರಿಂದ ಫಿಲಿಪ್ಪೀನ್ಸ್ ತಂಡವನ್ನು ಮಣಿಸಿದ ಭಾರತದ ಆಟಗಾರ್ತಿಯರು, 2.5–1.5ರಿಂದ ಕಜಕಿಸ್ತಾನವನ್ನು ಎಂಟನೇ ಸುತ್ತಿನಲ್ಲಿ ಹಾಗೂ ಅಂತಿಮ ಸುತ್ತಿನಲ್ಲಿ 2.5–1.5ರಿಂದ ವಿಯೆಟ್ನಾಂ ವಿರುದ್ಧ ಗೆದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.