ADVERTISEMENT

ಬಾಕ್ಸಿಂಗ್‌: ಭಾರತಕ್ಕೆ ಸಮಗ್ರ ಪ್ರಶಸ್ತಿ

ಪಿಟಿಐ
Published 3 ಫೆಬ್ರುವರಿ 2020, 19:40 IST
Last Updated 3 ಫೆಬ್ರುವರಿ 2020, 19:40 IST

ನವದೆಹಲಿ: ಭಾರತದ ಜೂನಿಯರ್‌ ಮತ್ತು ಯೂತ್‌ ವಿಭಾಗದ ಬಾಕ್ಸರ್‌ಗಳು ಸ್ವೀಡನ್‌ನಲ್ಲಿ ಭಾನುವಾರ ಮುಕ್ತಾಯವಾದ ಗೋಲ್ಡನ್‌ ಗರ್ಲ್‌ ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದಿದ್ದಾರೆ. ಭಾರತ ತಂಡದವರು ಒಟ್ಟು 14 ಪದಕಗಳನ್ನು ಜಯಿಸಿ ಈ ಸಾಧನೆ ಮಾಡಿದ್ದಾರೆ.

ಜೂನಿಯರ್‌ ಮಹಿಳಾ ತಂಡದವರು ಐದು ಚಿನ್ನ, ಮೂರು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದರೆ, ಯೂತ್‌ ತಂಡದವರು ಒಂದು ಚಿನ್ನ ಮತ್ತು ನಾಲ್ಕು ಕಂಚಿನ ಪದಕಗಳನ್ನು ಜಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT