ADVERTISEMENT

ಆರ್ಚರಿ: ಪ್ರಾಬಲ್ಯ ಮೆರೆದ ಭಾರತದ ಸ್ಪರ್ಧಿಗಳು

ಎರಡನೇ ಹಂತದ ಅರ್ಚರಿ ವಿಶ್ವಕಪ್‌

ಪಿಟಿಐ
Published 8 ಮೇ 2019, 19:26 IST
Last Updated 8 ಮೇ 2019, 19:26 IST

ಶಾಂಘೈ: ಭಾರತದ ಸ್ಪರ್ಧಿಗಳು ಎರಡನೇ ಹಂತದ ಅರ್ಚರಿ ವಿಶ್ವಕಪ್‌ನಲ್ಲಿ ಪಾರಮ್ಯ ಮೆರೆದಿದ್ದಾರೆ. ಅಂಕಿತಾ ಭಕತ್‌, ಪ್ರೀತಿ, ವಕೀಲರಾಜ್‌ ದಿಂಡೋರ್‌ ಹಾಗೂ ಗುರ್ವಿಂದರ್‌ ಸಿಂಗ್‌ ವಿವಿಧ ವಿಭಾಗಗಳಲ್ಲಿ ಗೆದ್ದಿದ್ದಾರೆ.

ಪುರುಷರ ಸಂಯುಕ್ತ ವಿಭಾಗದ ಅರ್ಹತಾ ಸುತ್ತಿನಲ್ಲಿ ಗುರ್ವಿಂದರ್‌ ಭಾರತದವರೇ ಆದ ಲವಜೋತ್ ಸಿಂಗ್‌ ಅವರನ್ನು 145–143 ಪಾಯಿಂಟ್‌ಗಳಿಂದ ಮಣಿಸಿದರು.

ಅಂಕಿತಾ, ರಷ್ಯಾದ ಎಲೆನಾ ಒಸಿಪೊವಾ ಸವಾಲಿಗೆ ದಿಟ್ಟ ಉತ್ತರ ನೀಡಿದರು. 7–3 ಅಂತರದಿಂದ ಗೆಲುವಿನ ತೋರಣ ಕಟ್ಟಿದರು. ಪ್ರಶಸ್ತಿ ರೇಸ್‌ನಲ್ಲಿರುವ ಪ್ರೀತಿ, ಭಾರತದ ಸಂಗೀತಾ ಅವರನ್ನು 6–2 ಪಾಯಿಂಟ್‌ಗಳಿಂದ ಸೋಲಿಸಿದರು.

ADVERTISEMENT

ಪುರುಷರ ರಿಕರ್ವ್‌ ವೈಯಕ್ತಿಕ ಸ್ಪರ್ಧೆಯಲ್ಲಿ ವಕೀಲ್‌ರಾಜ್‌ ಕಜಕಸ್ತಾನದ ಡೆನಿಸ್‌ ಗ್ಯಾನ್‌ಕಿನ್‌ ಅವರನ್ನು ಮಣಿಸಿದರು. ಪುರುಷರ ತಂಡ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಜಗದೀಶ್‌ ಚೌಧರಿ, ಚಮನ್‌ಸಿಂಗ್‌ ಹಾಗೂ ಸುಖ್‌ಚೈನ್‌ ಸಿಂಗ್‌ ಮೋಡಿ ಮಾಡಿದರು. ಅವರು ಇರಾನ್‌ನ ಎದುರಾಳಿಗಳನ್ನು ಸೋಲಿಸಿದರು.

ಮಿಶ್ರ ಜೋಡಿ ವಿಭಾಗದಲ್ಲಿ ಚೌಧರಿ ಹಾಗೂ ಪ್ರೀತಿ ರೊಮೇನಿಯಾ ಜೋಡಿಯನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.