ADVERTISEMENT

ವಿಯೆಟ್ನಾಂ ಓಪನ್: ಭಾರತದ ಸವಾಲು ಅಂತ್ಯ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2023, 15:42 IST
Last Updated 15 ಸೆಪ್ಟೆಂಬರ್ 2023, 15:42 IST
<div class="paragraphs"><p> ಷಟಲ್ ಬ್ಯಾಡ್ಮಿಂಟನ್ ಅಂಕಣ</p></div>

ಷಟಲ್ ಬ್ಯಾಡ್ಮಿಂಟನ್ ಅಂಕಣ

   

ಹೊ ಚಿ ಮಿನ್‌ ಸಿಟಿ (ಪಿಟಿಐ): ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಕಣದಲ್ಲಿದ್ದ ‌ಸಿಮ್ರಾನ್ ಸಿಂಘಿ– ರಿತಿಕಾ ಠಕ್ಕರ್ ಜೋಡಿ ನಿರ್ಗಮಿಸುವುದರೊಂದಿಗೆ ವಿಯೆಟ್ನಾಂ ಓಪನ್ ಸೂಪರ್ 100 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸವಾಲಿಗೆ ತೆರೆಬಿದ್ದಿದೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಭಾರತದ ಜೋಡಿಯು ಕ್ವಾರ್ಟರ್‌ ಫೈನಲ್‌ ಹಂತದ ಪಂದ್ಯದಲ್ಲಿ 21-18, 15-21, 15-21ರಿಂದ ಶ್ರೇಯಾಂಕರಹಿತ ಜೋಡಿ ಜಿಯಾಂಗ್ ಯಿ ಹುವಾ ಮತ್ತು ಲಿ ಝಿ ಕ್ವಿಂಗ್ (ಚೀನಾ ತೈಪೆ) ಅವರಿಗೆ ಶರಣಾಯಿತು.

ADVERTISEMENT

ಭಾರತದ ಇತರ ಆಟಗಾರರು ಗುರುವಾರವೇ ಟೂರ್ನಿಯಿಂದ ಹೊರಬಿದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.