ADVERTISEMENT

ಲೈಂಗಿಕ ನಿಂದನೆಯ ಪತ್ರ ಬಂದಿತ್ತು: ಚೆಸ್ ಆಟಗಾರ್ತಿ ದ್ರೋಣವಳ್ಳಿ ಹರಿಕಾ

ಪಿಟಿಐ
Published 12 ಫೆಬ್ರುವರಿ 2022, 14:41 IST
Last Updated 12 ಫೆಬ್ರುವರಿ 2022, 14:41 IST
ಹರಿಕಾ ದ್ರೋಣವಲ್ಲಿ –ಟ್ವಿಟರ್ ಚಿತ್ರ
ಹರಿಕಾ ದ್ರೋಣವಲ್ಲಿ –ಟ್ವಿಟರ್ ಚಿತ್ರ   

ಚೆನ್ನೈ: ಲಾಟ್ವಿಯಾದಲ್ಲಿ ಕಳೆದ ವರ್ಷ ನಡೆದ ಟೂರ್ನಿಯ ಸಂದರ್ಭದಲ್ಲಿ ತಮಗೆ ಲೈಂಗಿಕ ನಿಂದನೆಯ ಪತ್ರ ಬಂದಿತ್ತು ಎಂದು ಭಾರತದ ಚೆಸ್ ಆಟಗಾರ್ತಿ ದ್ರೋಣವಳ್ಳಿ ಹರಿಕಾ ಆರೋಪಿಸಿದ್ದಾರೆ.

‘ರಿಗಾದಲ್ಲಿ ನಡೆದ ಗ್ರ್ಯಾಂಡ್‌ ಸ್ವಿಸ್‌ ಟೂರ್ನಿಯ ವೇಳೆ ಹಲವರಿಗೆ ಈ ರೀತಿಯ ಪತ್ರ ಬಂದಿತ್ತು. ಟೂರ್ನಿಯ ಕೊನೆಯ ದಿನದವರೆಗೆ ಈ ಕುರಿತು ನನಗೆ ಅರಿವಿರಲಿಲ್ಲ. ಅಂತರರಾಷ್ಟ್ರೀಯ ಚೆಸ್ ಫೆಡರೇಷನ್‌ (ಫಿಡೆ) ಈ ವಿಷಯವನ್ನು ಸಮರ್ಪಕವಾಗಿ ನಿರ್ವಹಿಸಿತು‘ ಎಂದು ವಿಶ್ವ ರ‍್ಯಾಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿರುವ ಹರಿಕಾ ಅವರು ಹೇಳಿದ್ದಾರೆ.

‘ಪತ್ರವನ್ನು ನಾನು ತೆರೆದು ನೋಡಲಿಲ್ಲ. ಇದರಿಂದ ನನಗೆ ಯಾವುದೇ ತೊಂದರೆಯಾಗಲಿಲ್ಲ. ಫಿಡೆ ಗಮನಕ್ಕೆ ತಂದ ಬಳಿಕ ಈ ಪತ್ರಗಳನ್ನು ಪೊಲೀಸರಿಗೆ ಒಪ್ಪಿಸಿತು‘ ಎಂದು ಅವರು ಹೇಳಿದ್ದಾರೆ.

ADVERTISEMENT

‘ರಿಗಾದಲ್ಲಿ ನಡೆದ ಗ್ರ್ಯಾಂಡ್ ಸ್ವಿಸ್ ಟೂರ್ನಿಯ ಸಮಯದಲ್ಲಿ ಪತ್ರಗಳನ್ನು ಸ್ವೀಕರಿಸಿದ ಆಟಗಾರರ ಪರವಾಗಿ ಫಿಡೆ ಕ್ರಮ ಕೈಗೊಂಡಿದೆ. ಆಟಗಾರರ ಗೊಂದಲವನ್ನು ಕಡಿಮೆ ಮಾಡಲು ತಕ್ಷಣವೇ ಪೊಲೀಸರಿಗೆ ವರದಿ ಮಾಡಿದ್ದೇವೆ. ಲಾಟ್ವಿಯಾ ಪೊಲೀಸರು ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ‘ ಎಂದು ಫಿಡೆ ತಿಳಿಸಿದೆ.

ರಷ್ಯಾ ಮಾಧ್ಯಮಗಳ ವರದಿಯ ಪ್ರಕಾರ 15 ಮಂದಿಗೆ ಲೈಂಗಿಕ ನಿಂದನೆಯ ಪತ್ರಗಳು ಬಂದಿದ್ದವು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.