ರೊಸಾರಿಯೊ (ಅರ್ಜೆಂಟೀನಾ): ಭಾರತ ಜೂನಿಯರ್ ಮಹಿಳಾ ತಂಡವು ಭಾನುವಾರ 2–1 ಗೋಲುಗಳಿಂದ ಚಿಲಿ ತಂಡವನ್ನು ಮಣಿಸಿ, ಚತುಷ್ಕೋನ ಹಾಕಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಎರಡನೇ ಕ್ವಾರ್ಟರ್‌ನಲ್ಲಿ ಜವೇರಿಯಾ ಸಾಂಜ್ (20ನೇ ನಿಮಿಷ) ಅವರು ಚೆಂಡನ್ನು ಗುರಿ ಸೇರಿಸಿ ಚಿಲಿ ತಂಡಕ್ಕೆ ಮುನ್ನಡೆ ಒದಗಿಸಿದರು. ಆದರೆ, 39ನೇ ನಿಮಿಷದಲ್ಲಿ ಸುಖ್ವೀರ್ ಕೌರ್ ಗೋಲು ದಾಖಲಿಸಿದ್ದರಿಂದ, ಉಭಯ ತಂಡಗಳ ಸ್ಕೋರ್ ಸಮಬಲಗೊಂಡಿತು. ನಂತರದಲ್ಲಿ ಮೇಲುಗೈ ಸಾಧಿಸಲು ಉಭಯ ತಂಡಗಳು ತೀವ್ರ ಸ್ಪರ್ಧೆಗೆ ಇಳಿದವು. 59ನೇ ನಿಮಿಷದಲ್ಲಿ ಕನಿಕಾ ಸಿವಾಚ್ ಅವರು ಭಾರತದ ಪರ ಗೆಲುವಿನ ಗೋಲು ದಾಖಲಿಸಿದರು.
ನಿಧಿ ನಾಯಕತ್ವದ ಭಾರತ ತಂಡವು ಸೋಮವಾರ ಉರುಗ್ವೆ ತಂಡವನ್ನು ಎದುರಿಸಲಿದೆ. ಬುಧವಾರ ಆತಿಥೇಯ ಆರ್ಜೆಂಟೀನಾ ತಂಡದ ವಿರುದ್ಧ ಭಾರತ ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.