
ಪ್ರಜಾವಾಣಿ ವಾರ್ತೆ
ನವದೆಹಲಿ (ಪಿಟಿಐ): ಭಾರತದ ಜೂನಿಯರ್ ಪುರುಷರ ಮತ್ತು ಮಹಿಳೆಯರ ಹಾಕಿ ತಂಡಗಳು ನೆದರ್ಲೆಂಡ್ಸ್ ಪ್ರವಾಸವನ್ನು ಗೆಲುವಿನೊಂದಿಗೆ ಆರಂಭಿಸಿವೆ.
ಮಹಿಳೆಯರ ತಂಡದವರು 3–2 ಗೋಲುಗಳಿಂದ ಸೀನಿಯರ್ ಇಡಿಇ ತಂಡವನ್ನು ಮಣಿಸಿದರು. ರವೀನಾ, ಕರುಣಾ ಮಿಂಜ್ ಮತ್ತು ಭವ್ಯಾ ಅವರು ಗೋಲು ಗಳಿಸಿ ಗೆಲುವಿಗೆ ಕಾರಣರಾದರು.
ಪುರುಷರ ತಂಡ, ನೆದರ್ಲೆಂಡ್ಸ್ ಜೂನಿಯರ್ ತಂಡದ ವಿರುದ್ಧ 8–0 ಗೋಲುಗಳಿಂದ ಜಯ ಸಾಧಿಸಿತು. ಅಜೀತ್ ಯಾದವ್ ಹ್ಯಾಟ್ರಿಕ್ ಗೋಲು ಗಳಿಸಿದರೆ, ರೋಹಿತ್ ಸಿಂಗ್ ಎರಡು ಗೋಲುಗಳನ್ನು ತಂದಿತ್ತರು. ಇತರ ಗೋಲುಗಳನ್ನು ಆಶು ಮೌರ್ಯ, ಶ್ರೀಜನ್ ಯಾದವ್ ಮತ್ತು ರಾಹುಲ್ ರಾಜ್‌ಭರ್ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.