ADVERTISEMENT

ಏಷ್ಯನ್ ಗೇಮ್ಸ್‌ಗೆ ಭಾರತ ಮಹಿಳಾ ಸಾಫ್ಟ್‌ ಬಾಲ್ ತಂಡ

ಪಿಟಿಐ
Published 18 ಏಪ್ರಿಲ್ 2022, 13:10 IST
Last Updated 18 ಏಪ್ರಿಲ್ 2022, 13:10 IST

ನವದೆಹಲಿ: ಏಷ್ಯನ್ ಗೇಮ್ಸ್‌ನ ಸಾಫ್ಟ್‌ಬಾಲ್ ಸ್ಪರ್ಧೆಯಲ್ಲಿ ಪದಾರ್ಪಣೆ ಮಾಡಲು ಭಾರತ ಮಹಿಳಾ ತಂಡ ಸಜ್ಜಾಗಿದೆ. ಹಾಂಗ್ಜುವಿನಲ್ಲಿ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ತಂಡಕ್ಕೆ ವೈಲ್ಡ್ ಕಾರ್ಡ್ ಪ್ರವೇಶ ಲಭಿಸಿದೆ.

‘ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲು ವೈಲ್ಡ್ ಕಾರ್ಡ್ ಪ್ರವೇಶ ಲಭಿಸಿರುವುದು ಭಾರತದ ಸಾಫ್ಟ್ ಬಾಲ್ ಕ್ರೀಡೆಗೆ ಸಂಬಂಧಿಸಿ ಮಹತ್ವದ ಮೈಲುಗಲ್ಲು ಆಗಿದ್ದು ದೇಶದ ಸಾಫ್ಟ್‌ಬಾಲ್ ತಂಡಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಅತ್ಯುತ್ತಮ ಅವಕಾಶವಾಗಿದೆ’ ಎಂದು ಭಾರತ ಸಾಫ್ಟ್‌ಬಾಲ್ ಸಂಸ್ಥೆಯ ಅಧ್ಯಕ್ಷ ನೀತಲ್ ನಾರಂಗ್ ಅಭಿಪ್ರಾಯಪಟ್ಟಿದ್ದಾರೆ.

‘ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ತಂಡವನ್ನು ಸಜ್ಜುಗೊಳಿಸುವ ದೃಷ್ಟಿಯಲ್ಲಿ ಏಷ್ಯನ್ ಗೇಮ್ಸ್‌ ಪ್ರಮುಖ ಹೆಜ್ಜೆಯಾಗಲಿದೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶ ಗಿಟ್ಟಿಸಿಕೊಳ್ಳಲು ಇದು ಪ್ರೇರಣೆಯಾಗಲಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.