ಭಾರತ ತಂಡದ ನಾಯಕಿ ಸಲೀಮಾ ಟೆಟೆ
–ಎಕ್ಸ್ ಚಿತ್ರ
ಬರ್ಲಿನ್: ಎಫ್‌ಐಎಚ್ ಪ್ರೊ ಲೀಗ್‌ನಿಂದ ಈಗಾಗಲೇ ಹಿಂಬಡ್ತಿ ಪಡೆದಿರುವ ಭಾರತ ಮಹಿಳಾ ಹಾಕಿ ತಂಡವು ಭಾನುವಾರ ನಡೆದ ತನ್ನ ಕೊನೆಯ ಪಂದ್ಯದಲ್ಲಿ ಚೀನಾ ವಿರುದ್ಧ 2-3 ಗೋಲುಗಳಿಂದ ಪರಾಭವಗೊಂಡಿತು. ಇದು ಭಾರತ ತಂಡಕ್ಕೆ ಯುರೋಪಿಯನ್ ಲೆಗ್‌ನಲ್ಲಿ ಸತತ ಎಂಟನೇ ಸೋಲು.
ಸಲೀಮಾ ಟೆಟೆ ಬಳಗವು 16 ಪಂದ್ಯಗಳಿಂದ 10 ಅಂಕಗಳೊಂದಿಗೆ ಒಂಬತ್ತು ತಂಡಗಳ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಹೀಗಾಗಿ, ಮುಂದಿನ ವರ್ಷ ಎಫ್‌ಐಎಚ್‌ನ ಎರಡನೇ ಸ್ತರವಾದ ಎಫ್‌ಐಎಚ್ ನೇಷನ್ಸ್ ಕಪ್‌ನಲ್ಲಿ ಆಡಬೇಕಾಗಿದೆ.
ಭಾರತದ ಪರ ಸುನೆಲಿಟಾ ಟೊಪ್ಪಾ (9ನೇ ನಿಮಿಷ) ಮತ್ತು ರುತುಜಾ ದಾದಾಸೊ ಪಿಸಾಲ್ (38ನೇ ನಿಮಿಷ) ಗೋಲು ಗಳಿಸಿದರು. ಎದುರಾಳಿ ತಂಡದ ಪರ ಜಾಂಗ್ ಯಿಂಗ್ (19ನೇ ಮತ್ತು 39ನೇ ನಿಮಿಷ) ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸಿದರು. ಕ್ಸು ವೆನ್ಯು (53ನೇ) ನಿರ್ಣಾಯಕ ಗೋಲು ದಾಖಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.