ನವದೆಹಲಿ: ಭಾರತದ ಪ್ಯಾರಾ ಅಥ್ಲೀಟ್ ಮಹೇಂದ್ರ ಗುರ್ಜರ್ ಅವರು ಸ್ವಿಜರ್ಲೆಂಡ್‌ನಲ್ಲಿ ನಡೆಯುತ್ತಿರುವ ನಾಟ್ವಿಲ್ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾನ್‌ಪ್ರಿ ಕೂಟದಲ್ಲಿ ಭಾನುವಾರ ಪುರುಷರ ಜಾವೆಲಿನ್ ಎಫ್42 ವಿಭಾಗದಲ್ಲಿ 61.17 ಮೀ. ದೂರ ಎಸೆದು ವಿಶ್ವ ದಾಖಲೆ ಸ್ಥಾಪಿಸಿದ್ದಾರೆ.
27 ವರ್ಷ ವಯಸ್ಸಿನ ಗುರ್ಜರ್ ಅವರು 2022ರಲ್ಲಿ ಬ್ರೆಜಿಲ್‌ನ ರಾಬರ್ಟೊ ಫ್ಲೋರಿಯಾನಿ ಎಡ್ನೆಲ್‌ಸನ್ ಸ್ಥಾಪಿಸಿದ್ದ ದಾಖಲೆ (59.19 ಮೀ.) ಮುರಿದರು. ಮೂರನೇ ಯತ್ನದಲ್ಲಿ ವಿಶ್ವದಾಖಲೆ ಥ್ರೊ ದಾಖಲಿಸಿದರು.
ಒಂದು ಕಾಲಿನ ಚಲನೆಯ ಸಮಸ್ಯೆಯಿರುವ ಫೀಲ್ಡ್ ಅಥ್ಲೀಟುಗಳು ಎಫ್42 ವಿಭಾಗದಲ್ಲಿ ಸ್ಪರ್ಧಿಸುತ್ತಾರೆ.
ಎರಡು ಬಾರಿಯ ಪ್ಯಾರಾಲಿಂಪಿಕ್ ಸ್ವರ್ಣ ವಿಜೇತ ಹಾಗೂ ವಿಶ್ವದಾಖಲೆ ವೀರ ಸುಮಿತ್ ಅಂಟಿಲ್ ಅವರು ಪುರುಷರ ಜಾವೆಲಿನ್ ಎಫ್64 ವಿಭಾಗದಲ್ಲಿ 72.35 ಮೀ. ದೂರ ದಾಖಲಿಸಿ ಅಗ್ರಸ್ಥಾನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.