ADVERTISEMENT

ಎಂಟರ ಘಟ್ಟಕ್ಕೆ ಸಿಂಧು ಲಗ್ಗೆ

ಇಂಡೊನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಸವಾಲೊಡ್ಡಿದ ಮಿಯಾ ಬ್ಲಿಚ್‌ಫೆಲ್ಟ್

ಪಿಟಿಐ
Published 18 ಜುಲೈ 2019, 17:41 IST
Last Updated 18 ಜುಲೈ 2019, 17:41 IST
ಪಿ.ವಿ.ಸಿಂಧು
ಪಿ.ವಿ.ಸಿಂಧು   

ಜಕಾರ್ತಾ: ಭಾರತದ ಅಗ್ರಮಾನ್ಯ ಆಟಗಾರ್ತಿ ಪಿ.ವಿ. ಸಿಂಧು ಮೂರು ಗೇಮ್‌ಗಳ ಹೋರಾಟದಲ್ಲಿ ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಟ್‌ ಅವರನ್ನು ಸೋಲಿಸಿ ಇಂಡೊನೇಷ್ಯಾ ಓಪನ್‌ ವರ್ಲ್ಡ್‌ ಟೂರ್‌ ಸೂಪರ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್‌ ತಲುಪಿಸಿದರು.

ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಸಿಂಧು 21–14, 17–21, 21–11ರಲ್ಲಿ ಬ್ಲಿಚ್‌ಫೆಲ್ಟ್‌ ಅವರನ್ನು ಸೋಲಿಸಿದರು. 62 ನಿಮಿಷಗಳವರೆಗೆ ನಡೆದ ಪಂದ್ಯದಲ್ಲಿ ಗೆಲುವಿಗೆ ಸಿಂಧು ತಮ್ಮೆಲ್ಲಾ ಅನುಭವ ಬಳಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT