ADVERTISEMENT

ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಮಗ್ರ ಪ್ರಶಸ್ತಿ

ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2018, 16:27 IST
Last Updated 4 ಅಕ್ಟೋಬರ್ 2018, 16:27 IST
ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷ, ಮಹಿಳೆಯರ ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾಲಯ ತಂಡ ಸಮಗ್ರ ಪ್ರಶಸ್ತಿ ಪಡೆಯಿತು. (ಎಡದಿಂದ ನಿಂತವರು) ಸುಮಾ, ಚೈತ್ರಾ ದೇವಾಡಿಗ, ಅನಿಲ್‌ಕುಮಾರ್, ಅಬ್ದುಲ್ ಬ್ಯಾರಿ, ಕುಶ್ಮೇಶ್‌ಕುಮಾರ್‌, ನರೇಂದ್ರ ಪ್ರತಾಪ್‌ ಸಿಂಗ್, ದಿನೇಶ್. (ಎಡದಿಂದ ಕುಳಿತವರು) ವಿಶಾಲಾಕ್ಷಿ, ಶ್ಯಾಂ, ಪ್ರಿಯಾಂಕ ಕೈಲಾಶ್, ಭಗತ್ ಶೀತಲ್, ಜ್ಯೋತಿ ಚೌವಾಣ್

ಕಲಬುರ್ಗಿ: ಮಂಗಳೂರು ವಿಶ್ವವಿದ್ಯಾಲಯ ತಂಡವು ಗುರುವಾರ ಇಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದಿತು. ಸತತ ಮೂರನೇ ವರ್ಷ ಈ ಸಾಧನೆಯನ್ನು ಮಾಡಿತು.

ಗುಲಬರ್ಗಾ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಡೆದ ಸ್ಪರ್ಧೆಯಲ್ಲಿ ಮಂಗಳೂರು ವಿವಿಯ ಪುರುಷರ ತಂಡ 15 ಮತ್ತು ಮಹಿಳೆಯರ ತಂಡ 50 ಪಾಯಿಂಟ್ಸ್ ಕಲೆ ಹಾಕಿದವು.

ಪುರುಷರ ತಂಡ ವಿಭಾಗದಲ್ಲಿ ಮಂಗಳೂರು ವಿವಿ ಪ್ರಥಮ, ರೋಹ್ಟಕ್‌ನ ಮಹರ್ಷಿ ದಯಾನಂದ ವಿವಿ ದ್ವಿತೀಯ ಮತ್ತು ಚಂಡೀಗಡದ ಪಂಜಾಬ್ ವಿವಿ ತೃತೀಯ ಸ್ಥಾನ ಪಡೆದವು.

ADVERTISEMENT

ಮಹಿಳಾ ವಿಭಾಗದಲ್ಲಿ ಪಟಿಯಾಲದ ಪಂಜಾಬಿ ವಿವಿ ಪ್ರಥಮ, ಮಂಗಳೂರು ವಿವಿ ದ್ವಿತೀಯ ಮತ್ತು ಗೋರಖ್‌ಪುರದ ದೀನದಯಾಳ್ ಉಪಾಧ್ಯಾಯ ವಿವಿ ತೃತೀಯ ಸ್ಥಾನ ಗಳಿಸಿದವು.

ರೋಹ್ಟಕ್‌ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದ ಕಾರ್ತಿಕ್‌ ಕುಮಾರ್ ಮತ್ತು ಆರ್‌ಟಿಎಂ ನಾಗಪುರ ವಿಶ್ವವಿದ್ಯಾಲಯದ ಪ್ರಜಕ್ತಾ ಗೋಡಬೋಲೆ ವೈಯಕ್ತಿಕ ವಿಭಾಗದಲ್ಲಿ ಚಾಂಪಿಯನ್ ಆದರು. ಕಾರ್ತಿಕ್ 30.40 ಮತ್ತು ಪ್ರಜಕ್ತಾ 35.55 ನಿಮಿಷದಲ್ಲಿ ಗುರಿ ಮುಟ್ಟಿದರು.

ಮಂಗಳೂರು ವಿವಿಯ ನರೇಂದ್ರ ಪ್ರತಾಪ್ ಸಿಂಗ್ (31.7), ದಿನೇಶ್‌ (31.11) ಮತ್ತು ಅಬ್ದುಲ್ ಬ್ಯಾರಿ (31.15) ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನ ಪಡೆದರು. ಜ್ಯೋತಿ ಚವಾಣ್ (36.38) ಕಂಚಿನ ಪದಕ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.