ADVERTISEMENT

ಅಂತರರಾಷ್ಟ್ರೀಯ ಚೆಸ್‌ ಟೂರ್ನಿ 10ರಂದು ಆರಂಭ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 19:41 IST
Last Updated 3 ಅಕ್ಟೋಬರ್ 2019, 19:41 IST

ಬೆಂಗಳೂರು: ಕಶ್ವಿ ಚೆಸ್ ಸ್ಕೂಲ್ ಕುಂದಾಪುರ ವತಿಯಿಂದ ಇದೇ 10ರಿಂದ 17ರವರೆಗೆ ಅಂತರರಾಷ್ಟ್ರೀಯ ಮಟ್ಟದ ಮುಕ್ತ ಫಿಡೆ ರೇಟಿಂಗ್ ಚೆಸ್‌ ಟೂರ್ನಿಯು ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ನಡೆಯಲಿದೆ.

‘ಟೂರ್ನಿಯನ್ನು ಕೋಟೇಶ್ವರದ ಹಳೆ ವಿದ್ಯಾರ್ಥಿಗಳ ಸಂಘ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಸಹಯೋಗದಲ್ಲಿ ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮ ಬಾರಿಗೆ ಆಯೋಜಿಸಲಾಗಿದೆ.ವಯಸ್ಸಿನ ಮಿತಿ ಇಲ್ಲ’ ಎಂದುಕುಂದಾಪುರದ ಕಶ್ವಿ ಚೆಸ್ ಸ್ಕೂಲ್ ವ್ಯವಸ್ಥಾಪಕ ಬಿ. ನರೇಶ್ ಗುರುವಾರ ತಿಳಿಸಿದರು.

‘ಟೂರ್ನಿಗೆ ಕರ್ನಾಟಕ, ಕೇರಳ, ದೆಹಲಿ ಹಾಗೂ ಇತರ ರಾಜ್ಯಗಳಿಂದಲ್ಲದೆ, ವಿದೇಶದಿಂದಲೂ ಸ್ಪರ್ಧಿಗಳು ಬರಲಿದ್ದಾರೆ’ ಎಂದರು.

ADVERTISEMENT

ಟೂರ್ನಿಯು ಒಟ್ಟು ₹20.32 ಲಕ್ಷ ನಗದು ಬಹುಮಾನ ಒಳಗೊಂಡಿದೆ.161 ಟ್ರೋಫಿಗಳನ್ನು ಪ್ರತಿ ವಿಭಾಗದ ಹಾಗೂ ವಿವಿಧ ವಯೋಮಿತಿಯಲ್ಲಿ ಗೆದ್ದವರಿಗೆ ಪ್ರತ್ಯೇಕವಾಗಿ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.