ADVERTISEMENT

ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್ ಸ್ಪರ್ಧೆ ಆರಂಭ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 15:28 IST
Last Updated 18 ಮಾರ್ಚ್ 2021, 15:28 IST
ಅನೀಶ್ ಭಾನವಾಲಾ
ಅನೀಶ್ ಭಾನವಾಲಾ   

ನವದೆಹಲಿ (ಪಿಟಿಐ): ದೇಶದ ರಾಜಧಾನಿಯಲ್ಲಿ ಶುಕ್ರವಾರ ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್ ಸ್ಪರ್ಧೆ ಆರಂಭವಾಗಲಿದೆ.

ಕೊರೊನಾ ಕಾಲದಲ್ಲಿ ನಡೆಯುತ್ತಿರುವ ಈ ಚಾಂಪಿಯನ್‌ಷಿಪ್‌ನಲ್ಲಿ ಆತಿಥೇಯ ಭಾರತದ 57 ಶೂಟಿಂಗ್ ಪಟುಗಳು ಕಣಕ್ಕಿಳಿಯಲಿದ್ದಾರೆ. ಇಲ್ಲಿ 15 ಸ್ಪರ್ಧಿಗಳಿಗೆ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಅವಕಾಶವಿದೆ.

ಪಿಸ್ತೂಲ್ ಮತ್ತು ರೈಫಲ್ ಸೂಟಿಂಗ್‌ಪಟುಗಳಿಗೆ ಕಳೆದೊಂದು ವರ್ಷದಲ್ಲಿ ಆನ್‌ಲೈನ್ ಸ್ಪರ್ಧೆಗಳು ನಡೆದಿದ್ದವು. ಇದೀಗ ಶೂಟಿಂಗ್ ರೇಂಜ್‌ನಲ್ಲಿ ಇದೇ ಮೊದಲ ಸಲ ಮುಖಾಮುಖಿಯಾಗುವರು.

ADVERTISEMENT

ಈಚೆಗೆ ಈಜಿಪ್ತ್‌ನಲ್ಲಿ ನಡೆದಿದ್ದ ಶಾಟ್‌ಗನ್ ವಿಶ್ವಕಪ್‌ ಟೂರ್ನಿಯಲ್ಲಿ ಸ್ಕೀಟ್ ಮತ್ತು ಟ್ರ್ಯಾಪ್ ಸ್ಪರ್ಧಿಗಳು ಭಾಗವಹಿಸಿದ್ದರು.

ಕಾಮನ್‌ವೆಲ್ತ್‌ ಕೂಟದ ಚಿನ್ನದ ಪದಕವಿಜೇತ ಅನೀಶ್ ಭಾನವಾಲಾ, ದಿವ್ಯಾಂಶು ಸಿಂಗ್ ಪನ್ವಾರ್, ಪಂಕಜ್ ಕುಮಾರ್, ಐಶ್ವರ್ಯಾ ಪ್ರತಾಪ್ ಸಿಂಗ್ ತೋಮರ್, ಮನು ಭಾಕರ್, ಸೌರಭ್ ಚೌಧರಿ, ಅಭಿಷೇಕ್ ವರ್ಮಾ ಮತ್ತು ಯಶಸ್ವಿನಿ ಸೇರಿದಂತೆ ಭಾರತದ ಪ್ರಮುಖ ಶೂಟಿಂಗ್ ಪಟುಗಳು ಒಲಿಂಪಿಕ್ ಅರ್ಹತೆ ಗಿಟ್ಟಿಸಲು ಗುರಿ ಇಟ್ಟಿದ್ದಾರೆ.

53 ದೇಶಗಳ ಸ್ಪರ್ಧಿಗಳು ಕಣಕ್ಕಿಳಿಯಲಿದ್ದಾರೆ. ಇದರಲ್ಲಿ ಕೊರಿಯಾ, ಸಿಂಗಪುರ, ಅಮೆರಿಕ, ಇಂಗ್ಲೆಂಡ್, ಇರಾನ್, ಉಕ್ರೇನ್, ಫ್ರಾನ್ಸ್‌, ಹಂಗರಿ, ಇಟಲಿ, ಥಾಯ್ಲೆಂಡ್ ಮತ್ತು ಟರ್ಕಿಯ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದು ಭಾರತ ರೈಫಲ್ ಸಂಸ್ಥೆ (ಎನ್‌ಆರ್‌ಎಐ) ತಿಳಿಸಿದೆ. ಒಟ್ಟು 294 ಸ್ಪರ್ಧಿಗಳು ಪದಕಗಳಿಗೆ ಗುರಿ ಇಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.