ADVERTISEMENT

ಡೋಪಿಂಗ್: ಶಾಟ್‌ಪಟ್‌ ಆಟಗಾರ ಪೊಂಜಿಯೊಗೆ ನಿಷೇಧ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2023, 16:39 IST
Last Updated 20 ಡಿಸೆಂಬರ್ 2023, 16:39 IST
ಡೋಪಿಂಗ್
ಡೋಪಿಂಗ್   

ಮಿಲಾನ್: ಉದ್ದೀಪನ ಮದ್ದು ಸೇವನೆ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಇಟಲಿಯ ಶಾಟ್‌ಪಟ್‌ ಆಟಗಾರ ನಿಕ್ ಪೊಂಜಿಯೊ ಅವರನ್ನು  ಇಟಲಿ ಉದ್ದೀಪನ ಮದ್ದು ತಡೆ ಘಟಕವು 18 ತಿಂಗಳ ಕಾಲ ನಿಷೇಧಿಸಿದೆ. 

ಮುಂದಿನ ವರ್ಷದ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅವರನ್ನು ಹೊರಗಿಡಲಾಗಿದೆ.  ಉದ್ದೀಪನ ಮದ್ದು ತಡೆ ಘಟಕವು ಮೂರು ಸಂದರ್ಭಗಳಲ್ಲಿ ಸಂಘಟಿಸಿದ ದಿಢೀರ್ ಪರೀಕ್ಷೆಗಳಿಗೆ ನಿಕ್ ಗೈರುಹಾಜರಾಗಿದ್ದರು. ಇದರಿಂದಾಗಿ ಅವರಿಗೆ  ಶಿಕ್ಷೆ ವಿಧಿಸಲಾಗಿದೆ.

 ‘ಇದು ತನ್ನ ತಪ್ಪಲ್ಲ ಮತ್ತು ತನ್ನ ಫೋನ್‌ನ ಅಪ್ಲಿಕೇಶನ್‌ನಲ್ಲಿ ದೋಷವಿದೆ. ಹಾಗಾಗಿ ಯಾವುದೇ ನೋಟಿಫಿಕೆಷನ್‌ ಸ್ವೀಕರಿಸಲಿಲ್ಲ’ ಎಂದು ಪೊಂಜಿಯೊ ಹೇಳಿದ್ದಾರೆಂದು ಇಟಲಿ ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ನಿಷೇಧವು ಕಳೆದ ಫೆಬ್ರವರಿಯಲ್ಲಿ ಪ್ರಾರಂಭವಾಗಿದ್ದು, ಮುಂದಿನ ಆಗಸ್ಟ್ 27 ರವರೆಗೆ ಮುಂದುವರಿಯುತ್ತದೆ. ಒಲಿಂಪಿಕ್ಸ್ ಜುಲೈ 26 ರಿಂದ ಆಗಸ್ಟ್ 11 ರವರೆಗೆ ನಡೆಯಲಿದೆ.

ಕಳೆದ ವರ್ಷದ ಯುರೋಪಿಯನ್ ಚಾಂಪಿಯನ್ ಷಿಪ್ ನಲ್ಲಿ ಅವರು ನಾಲ್ಕನೇ ಸ್ಥಾನ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.