
ಜಾಸ್ಮಿನ್ ಲಂಬೋರಿಯಾ
ಬ್ಯಾಂಕಾಕ್ : ಕಾಮನ್‌ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತೆ ಜಾಸ್ಮಿನ್ ಲಂಬೋರಿಯಾ ಅವರು ವಿಶ್ವ ಒಲಿಂಪಿಕ್ ಬಾಕ್ಸಿಂಗ್ ಕ್ವಾಲಿಫೈಯರ್‌ನ 57 ಕೆ.ಜಿ ತೂಕದ ವಿಭಾಗದಲ್ಲಿ ಸ್ವಿಟ್ಜರ್ಲೆಂಡ್‌ನ ಅನಾ ಮರಿಜಾ ಮಿಲಿಸಿಕ್ ವಿರುದ್ಧ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆ ಗಳಿಸಲು ಮತ್ತಷ್ಟು ಹತ್ತಿರವಾದರು.
22 ವರ್ಷದ ಜಾಸ್ಮಿನ್, 16ನೇ ಸುತ್ತಿನಲ್ಲಿ ಸರ್ವಾನುಮತದ ತೀರ್ಪಿನ ಮೂಲಕ (5-0) ಮರಿಜಾ ಅವರನ್ನು ಸೋಲಿಸಿದರು. ಪ್ಯಾರಿಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು ಅವರು ಭಾನುವಾರ ಕ್ವಾರ್ಟರ್ ಫೈನಲ್‌ನಲ್ಲಿ ಗೆಲ್ಲಬೇಕಾಗಿದೆ.
ಪುರುಷರ 57 ಕೆ.ಜಿ ವಿಭಾಗದ ಸೆಮಿಫೈನಲ್‌ನಲ್ಲಿ ಮಾಜಿ ಯುವ ವಿಶ್ವ ಚಾಂಪಿಯನ್ ಸಚಿನ್ ಸಿವಾಚ್ ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಫಿಲಿಪೈನ್ಸ್‌ನ ಕಾರ್ಲೊ ಪಾಲಮ್ ವಿರುದ್ಧ 0-5 ಅಂತರದಲ್ಲಿ ಸೋತರು.
ಆದರೂ 57 ಕೆ.ಜಿ ವಿಭಾಗದಲ್ಲಿ ಮೂರು ಕೋಟಾ ಹೊಂದಿರುವುದರಿಂದ ಸಚಿನ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಮತ್ತೊಂದು ಅವಕಾಶ ಸಿಗಲಿದೆ. ಸೆಮಿಫೈನಲ್‌ನಲ್ಲಿ ಸೋತವರು ಭಾನುವಾರ ಕೋಟಾಕ್ಕಾಗಿ ಪರಸ್ಪರ ಸೆಣಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.