ನವದೆಹಲಿ: ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಲುಕಿರುವ ಭಾರತದ ಶಾಟ್‌ಪಟ್ ಸ್ಪರ್ಧಿ ಜಾಸ್ಮಿನ್ ಕೌರ್ ಅವರನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ.
ಪಂಜಾಬ್‌ನ 22 ವರ್ಷ ವಯಸ್ಸಿನ ಜಾಸ್ಮಿನ್ ಅವರು ಡೆಹ್ರಾಡೂನ್‌ನ ರಾಷ್ಟ್ರೀಯ ಕ್ರೀಡೆಗಳಲ್ಲಿ 15.97 ಮೀ. ಥ್ರೋದೊಡನೆ ಚಿನ್ನ ಗೆದ್ದಿದ್ದರು.
ಅವರಿಂದ ಪಡೆದ ಮಾದರಿಯಲ್ಲಿ ಟೆರ್ಬುಟಲೈನ್ ಅಂಶ ಪತ್ತೆಯಾಗಿದೆ. ಈ ಅಂಶ ಕೆಮ್ಮಿನ ಸಿರಪ್‌ಗಳಲ್ಲಿ ಸಾಮಾನ್ಯವಾಗಿರುತ್ತದೆ. 20 ವರ್ಷದೊಳಗಿನವರ ವಿಶ್ವ ಕುಸ್ತಿ ಕೂಟದಲ್ಲಿ ಬೆಳ್ಳಿ ಗೆದ್ದಿದ್ದ ನಿಕಿತಾ ಅವರ ಮೇಲೆ ನಾಲ್ಕು ವರ್ಷಗಳ ನಿಷೇಧ ಹೇರಲಾಗಿದೆ. ಈ ಶಿಕ್ಷೆ 2024ರ ಮೇ 28ರಿಂದ ಪೂರ್ವಾನ್ವಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.