ADVERTISEMENT

ಕರ್ನಾಟಕದ ಪ್ಯಾರಾ ಈಜುಪಟು ನಿರಂಜನ್‌ ಟೋಕಿಯೊ ಪ್ಯಾರಾಲಿಂಪಿಕ್ಸ್‌ಗೆ ಆಯ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಆಗಸ್ಟ್ 2021, 16:53 IST
Last Updated 8 ಆಗಸ್ಟ್ 2021, 16:53 IST
ನಿರಂಜನ್‌ ಮುಕುಂದ್‌
ನಿರಂಜನ್‌ ಮುಕುಂದ್‌   

ಬೆಂಗಳೂರು: ಕರ್ನಾಟಕದ ಪ್ಯಾರಾ ಈಜುಪಟು ನಿರಂಜನ್ ಮುಕುಂದನ್‌ ಅವರು ಟೋಕಿಯೊ ಪ್ಯಾರಾಲಿಂಪಿಕ್ಸ್‌–2020 ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಪುರುಷರ 50 ಮೀಟರ್ ಬಟರ್‌ಫ್ಲೈ-ಎಸ್ 7 ಸ್ಪರ್ಧೆಯಲ್ಲಿ ನಿರಂಜನ್‌ ಭಾಗವಹಿಸಲಿದ್ದಾರೆ ಎಂದು ಭಾರತದ ಪ್ಯಾರಾಲಿಂಪಿಕ್ ಸಮಿತಿ ಭಾನುವಾರ ತಿಳಿಸಿದೆ.

ADVERTISEMENT

ಆಗಸ್ಟ್ 24 ರಿಂದ ಸೆಪ್ಟೆಂಬರ್ 5ರ ವರೆಗೆ ಟೋಕಿಯೊ ಪ್ಯಾರಾಲಿಂಪಿಕ್ಸ್‌–2020 ಕ್ರೀಡಾಕೂಟ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.