ಬೆಂಗಳೂರು: ಒಲಿಂಪಿಯನ್ ದಿನಿಧಿ ದೇಸಿಂಗು ಮತ್ತು ಉತ್ಕರ್ಷ್ ಎಸ್ ಪಾಟೀಲ ಅವರು ಬುಧವಾರ ಆರಂಭವಾದ ಎನ್‌ಆರ್‌ಜೆ ರಾಜ್ಯ ಸೀನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಮಹಿಳೆ ಮತ್ತು ಪುರುಷರ ವಿಭಾಗಗಳಲ್ಲಿ ಚಿನ್ನ ಡಬಲ್ ಸಾಧನೆ ಮಾಡಿದರು.
ಬಸವನಗುಡಿಯ ಕಾರ್ಪೊರೇಷನ್ ಈಜುಕೊಳದಲ್ಲಿ ಕರ್ನಾಟಕ ಈಜು ಸಂಸ್ಥೆ ಆಯೋಜಿಸಿರುವ ಕೂಟದಲ್ಲಿ ಡಾಲ್ಫಿನ್ ಅಕ್ವೆಟಿಕ್ಸ್‌ನ ದಿನಿಧಿ ಅವರು ಮಹಿಳೆಯರ 100 ಮೀಟರ್ಸ್ ಬಟರ್‌ಫ್ಲೈ ಮತ್ತು 100 ಮೀಟರ್ಸ್ ಫ್ರೀಸ್ಟೈಲ್ ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿದರು. ಪುರುಷರ 100 ಮೀ ಬ್ಯಾಕ್‌ಸ್ಟ್ರೋಕ್ ಮತ್ತು 200ಮೀ ಬ್ಯಾಕ್‌ಸ್ಟ್ರೋಕ್ ವಿಭಾಗಗಳಲ್ಲಿ ಬಸವನಗುಡಿ ಅಕ್ವೆಟಿಕ್ ಸೆಂಟರ್‌ನ ಉತ್ಕರ್ಷ್‌ಎಸ್. ಪಾಟೀಲ ಮೊದಲ ಸ್ಥಾನ ಗಳಿಸಿದರು.
ಈಜುಕೂಟವು ಮೇ 23ರವರೆಗೆ ನಡೆಯಲಿದೆ.
ಫಲಿತಾಂಶಗಳು
ಪುರುಷರು: 100 ಮೀ ಬ್ಯಾಕ್‌ಸ್ಟ್ರೋಕ್: ಉತ್ಕರ್ಷ ಎಸ್ ಪಾಟೀಲ –1 (ಬಿಎಸಿ; ಕಾಲ: 56.42ಸೆ), ಆಕಾಶ್ ಮಣಿ (ಬಿಎಸಿ)–2, ಎಂ. ಧ್ಯಾನ್ (ಗ್ಲೋಬಲ್ ಸ್ವಿಮ್ ಸೆಂಟರ್)–3. 50 ಮೀ ಬ್ರೆಸ್ಟ್‌ಸ್ಟ್ರೋಕ್: ವಿದಿತ್ ಎಸ್ ಶಂಕರ್ (ಡಾಲ್ಫಿನ್; 29.64ಸೆ)–1, ಡಿ.ಎಸ್. ಪೃಥ್ವಿಕ್ (ಬಿಎಸಿ) –2, ಸೂರ್ಯ ಜೋಯಪ್ಪ (ಬಿಎಸಿ)–3. 100 ಮೀ ಬಟರ್‌ಫ್ಲೈ: ಚಿಂತನ್ ಎಸ್ ಶೆಟ್ಟಿ (ಲಕ್ಷ್ಯನ್ ಸ್ವಿಮ್ಮಿಂಗ್; 56.64ಸೆ)–1, ಎಸ್. ದರ್ಶನ್ –2, ತನೀಶ್ ಜಾರ್ಜ್ ಮ್ಯಾಥ್ಯೂ–3 (ಇಬ್ಬರೂ ಬಿಎಸಿ). 400 ಮೀ ಫ್ರೀಸ್ಟೈಲ್: ಅನೀಶ್ ಎಸ್ ಗೌಡ –1, ಎಸ್. ದಕ್ಷಣ –2, ಶಿವಾಂಕ್ ವಿಶ್ವನಾಥ್ –3 (ಮೂವರೂ ಬಿಎಸಿ) ಕಾಲ: 3ನಿ,59.56ಸೆ. 400 ಮೀ ಮೆಡ್ಲೆ: ಶಾನ್ ಗಂಗೂಲಿ –1, ಶಿವಾಂಕ್ ವಿಶ್ವನಾಥ್ –2, ಪವನ್ ಧನಂಜಯ್ –3 (ಮೂವರೂ ಬಿಎಸಿ) ಕಾಲ: 4ನಿ,34.60ಸೆ. 200ಮೀ ಬ್ಯಾಕ್‌ಸ್ಟ್ರೋಕ್: ಉತ್ಕರ್ಷ್ ಎಸ್ ಪಾಟೀಲ –1, ಆಕಾಶ್ ಮಣಿ –2, ಶಿವ ಶ್ರೀಧರ್ –3 (ಮೂವರೂ ಬಿಎಸಿ) ಕಾಲ: 2ನಿ,05.52ಸೆ. 100 ಮೀ ಫ್ರೀಸ್ಟೈಲ್: ತನೀಶ್ ಜಾರ್ಜ್ ಮ್ಯಾಥ್ಯೂ (ಬಿಎಸಿ; 51.51ಸೆ)–1, ಆಕಾಶ್ ಮಣಿ (ಬಿಎಸಿ)–2, ಚಿಂತನ್ ಎಸ್ ಶೆಟ್ಟಿ (ಲಕ್ಷ್ಯನ್ ಸ್ವಿಮ್ಮಿಂಗ್)–3. 100 ಮೀ ಬ್ರೆಸ್ಟ್‌ಸ್ಟ್ರೋಕ್: ಎಲ್. ಮಣಿಕಂಠ (ಬಿಎಸಿ; 1ನಿ.05.99ಸೆ)–1 ಸೂರ್ಯ ಜೋಯಪ್ಪಾ (ಬಿಎಸಿ)–2, ವಿದಿತ್ ಎಸ್. ಶಂಕರ್ (ಡಾಲ್ಫಿನ್)–3. 4X200ಮೀ ಫ್ರೀಸ್ಟೈಲ್: ಬಸವನಗುಡಿ ಅಕ್ವೆಟಿಕ್ ಸೆಂಟರ್ ಎ (8ನಿ,08.84ಸೆ)–1, ಡಾಲ್ಫಿನ್ ಅಕ್ವೆಟಿಕ್ಸ್ –2, ಬಸವನಗುಡಿ ಅಕ್ವೆಟಿಕ್ ಸೆಂಟರ್ ಬಿ –3
ಮಹಿಳೆಯರು: 100 ಮೀ ಬ್ಯಾಕ್‌ಸ್ಟ್ರೋಕ್: ವಿಹಿತಾ ನಯನಾ (ಬಿಎಸಿ; 1ನಿ,7.16ಸೆ)–1, ನೈಶಾ (ಬಿಎಸಿ)–2, ಕೆ.ಆರ್. ಶ್ರುತಿ (ಗ್ಲೋಬಲ್)–3. 50ಮೀ ಬ್ರೆಸ್ಟ್‌ಸ್ಟ್ರೋಕ್: ಮಾನವಿ ವರ್ಮಾ (ಡಾಲ್ಫಿನ್; 34.73ಸೆ)–1, ಎಸ್. ಲಕ್ಷ್ಯಾ (ಬಿಎಸಿ)–2, ಪ್ರತೀಕ್ಷಾ ಎನ್ ಶೆಣೈ (ಪುತ್ತೂರು ಅಕ್ವೆಟಿಕ್ ಕ್ಲಬ್)–3. 100 ಮೀ ಬಟರ್‌ಫ್ಲೈ: ದಿನಿಧಿ ದೇಸಿಂಗು (ಡಾಲ್ಫಿನ್; 1ನಿ,04.39ಸೆ)–1, ತ್ರಿಷಾ ಸಿಂಧು ಎಸ್ (ಗ್ಲೋಬಲ್ ಸ್ವಿಮ್ ಸೆಂಟರ್)–2, ನೈಶಾ ಶೆಟ್ಟಿ (ಸ್ವಿಮ್‌ಲೈಫ್)–3. 400 ಮೀ ಫ್ರೀಸ್ಟೈಲ್: ಶಿರಿನ್ (ಬಿಎಸಿ; 4ನಿ,36.45ಸೆ)–1, ಮೀನಾಕ್ಷಿ ಮೆನನ್ (ಬಿಎಸಿ)–2, ಅಶ್ಮಿತಾ ಚಂದ್ರ (ಇನ್ಸ್‌ಪೈರ್ ಇನ್ಸಿಟಿಟ್ಯೂಟ್ ಆಫ್ ಸ್ಪೋರ್ಟ್ಸ್)–3. 400 ಮೀ ಮೆಡ್ಲೆ: ಎಸ್. ತಾನ್ಯಾ (ಜೆಐಆರ್‌ಎಸ್; 5ನಿ,18.09ಸೆ)–1, ಮೀನಾಕ್ಷಿ ಮೆನನ್ –2, ಅದಿತಿ ಎನ್ ಮೂಲ್ಯ –3 (ಇಬ್ಬರೂ ಬಿಎಸಿ) 200 ಮೀ ಬ್ಯಾಕ್‌ಸ್ಟ್ರೋಕ್: ನೈಶಾ–1, ವಿಹಿತಾ ನಯನಾ –2, ಮೀನಾಕ್ಷಿ ಮೆನನ್ –3 (ಮೂವರು ಬಿಎಸಿ) ಕಾಲ: 2ನಿ.29.27ಸೆ. 100 ಮೀ ಫ್ರೀಸ್ಟೈಲ್: ದಿನಿಧಿ ದೇಸಿಂಗು (ಡಾಲ್ಫಿನ್ ಅಕ್ವೆಟಿಕ್ಸ್; 57.95ಸೆ)–1, ಎಸ್. ಋಜುಲಾ(ಡಾಲ್ಫಿನ್)–2, ಲತೀಶಾ ಮಂದಣ್ಣ (ಬಿಎಸಿ)–3. 100ಮೀ ಬ್ರೆಸ್ಟ್‌ಸ್ಟ್ರೋಕ್: ಮಾನವಿ ವರ್ಮಾ (ಡಾಲ್ಫಿನ್; 1ನಿ.18.04ಸೆ)–1, ಎಸ್. ತಾನ್ಯಾ (ಜೆಐಆರ್‌ಎಸ್)–2, ವಿ. ಹಿತೈಷಿ (ವಿಜಯನಗರ ಅಕ್ವೆಟಿಕ್ ಸೆಂಟರ್)–3. 4X100ಮೀ ಫ್ರೀಸ್ಟೈಲ್: ಡಾಲ್ಫಿನ್ ಅಕ್ವೆಟಿಕ್ಸ್ (4ನಿ.05.40ಸೆ)–1, ಬಿಎಸಿ–ಎ –2, ಗ್ಲೋಬಲ್ ಸ್ವಿಮ್ ಸೆಂಟರ್ –3
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.