ADVERTISEMENT

ಕಾರ್ಟಿ೦ಗ್ ರೇಸ್‌ ಮಿನುಗುತಾರೆ ಮಿಹಿರ್

​ಪ್ರಜಾವಾಣಿ ವಾರ್ತೆ
Published 27 ಜನವರಿ 2019, 19:45 IST
Last Updated 27 ಜನವರಿ 2019, 19:45 IST
ಮಿಹಿರ್‌
ಮಿಹಿರ್‌   

ಬೆಂಗಳೂರಿನ ಮಲ್ಲೇಶ್ವರದ ಬಾಲಕ ಮಿಹಿರ್ ಅವಲಕ್ಕಿ ಬಾಲ್ಯದಿಂದಲೂ ಸಾಹಸಿ ಪ್ರವೃತ್ತಿಯವನು. ಅದರಲ್ಲೂ ಕಾರು ಚಾಲನೆಯ ಬಗ್ಗೆ ಎಲ್ಲಿಲ್ಲದ ಆಸಕ್ತಿ. ಅದು ಈಗ ಮಿಹಿರ್‌ನ ದೊಡ್ಡ ಸಾಧನೆಯ ಪಯಣಕ್ಕೆ ಹಾದಿ ತೋರಿದೆ.

ಕಳೆದ ನವೆಂಬರ್‌ನಲ್ಲಿ ಹೈದರಾಬಾದಿನಲ್ಲಿ ನಡೆದ ಎಫ್.ಎಮ್.ಎಸ್.ಸಿ.ಐ.ರೊಟ್ಯಾಕ್ಸ್ ಮ್ಯಾಕ್ಸ್ ಕಾರ್ಟಿ೦ಗ್ ಚಾಂಪಿಯನ್‌ಷಿಪ್‌ನಲ್ಲಿ ವೈಸ್ ಚಾಂಪಿಯನ್ ಪಟ್ಟ ಗಳಿಸಿದ್ದಾನೆ. 15 ವರ್ಷ ವಯಸ್ಸಿನ ಮಿಹಿರ್ ರಾಜಾಜಿನಗರದ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಒಂಬತ್ತನೇ ತರಗತಿ ವಿದ್ಯಾರ್ಥಿ.

ಮಗನ ಆಸಕ್ತಿಗೆ ಹೆತ್ತವರಾದ ಸುಮನ್ ಅವಲಕ್ಕಿ ಹಾಗೂ ಸುಶ್ಮಿತಾ ಒತ್ತಾಸೆಯಾಗಿ ನಿಂತಿದ್ದಾರೆ. ಓದಿನೊಂದಿಗೆ ಯಶಸ್ಸು ಗಳಿಸುತ್ತಿರುವ ಮಿಹಿರ್ ಹೋದ ಅಕ್ಟೊಬರ್‌ನಲ್ಲಿ ಎರಡನೆಯ ಅತಿವೇಗದ ಚಾಲಕ ಎಂಬ ಹೆಗ್ಗಳಿಕೆ ಪಡೆದಿದ್ದ. ರೇಸರ್ ಬೈರ್ಲ್ ಆರ್ಟ್ ಇಂಡಿಯಾ ತಂಡದ ಸದಸ್ಯನಾಗಿದ್ದಾನೆ. ಎರಡು ವರ್ಷಗಳ ಹಿಂದೆ ಕಾರ್ಟಿ೦ಗ್ ಕ್ಷೇತ್ರಕ್ಕೆ ಕಾಲಿರಿಸಿದ ಮಿಹಿರ್ ಆರನೆಯ ಸ್ಥಾನ ಪಡೆದರೂ ವಿಚಲಿತನಾಗದೆ ಅಚಲ ನಂಬಿಕೆಯ ನೆಲೆಗಟ್ಟಿನಲ್ಲಿ ಸಾಧನೆಯ ಪಥದಲ್ಲಿ ಪರಿಶ್ರಮಪಡುತ್ತಿದ್ದಾನೆ.

ADVERTISEMENT

ಯುರೋಪ್‌ನಲ್ಲಿ ಜರುಗಿದ ಅಂತರರಾಷ್ಟ್ರೀಯ ಈಸಿಕಾರ್ಟ್ ಚಾಂಪಿಯನ್‌ಷಿಪ್‌ನ ಆರು ಅಂತರರಾಷ್ಟ್ರೀಯ ಸ್ಪರ್ಧೆಗಳ 35 ಚಾಲಕರಲ್ಲಿ ಏಳನೇ ಸ್ಥಾನ ಪಡೆದಿದ್ದ. 2017ರಲ್ಲಿ ಎಫ್.ಎಂ.ಎಸ್.ಸಿ.ಐ. 4 ಸ್ಟ್ರೋಕ್ ಚಾಂಪಿಯನ್‌ಷಿಪ್‌ನಲ್ಲಿ ಗೆದ್ದಿದ್ದ. ಕೊಯಮತ್ತೂರಿನಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ. ಬೆಂಗಳೂರಿನಲ್ಲಿ ಪ್ರಥಮ ಸ್ಥಾನ ಗಳಿಸಿದ್ದ.

ಮುಂದಿನ ವರ್ಷದಲ್ಲಿ ಕ್ರಮವಾಗಿ ಜೆಕೆ ಟೈರ್,ಎಫ್,ಎಂ. ಎಸ್. ಸಿ.ಐ. ಇಂಡಿಯನ್ ನ್ಯಾಷನಲ್ ರೇಸಿಂಗ್ ಚಾಂಪಿಯನ್ ಷಿಪ್, ಫಾರ್ಮುಲಾ ಎಲ್. ಜಿ. ಬಿ.4 ಜೆಕೆ ಎಫ್. ಐ. 304, ಎಂ. ಎಂ. ಎಸ್. ಎಫ್. ಎಂ. ಎಸ್. ಸಿ. ಐ. ರೊಟ್ಯಾಕ್ಸ್ ಮ್ಯಾಕ್ಸ್ ನ್ಯಾಷನಲ್ ಕಾರ್ಟಿ೦ಗ್ ಚಾಂಪಿಯನ್‌ಷಿಪ್, ಈಸಿ ಕಾರ್ಟ್ ಚಾ೦ಪಿಯನ್‌ಷಿಪ್ ಮೊದಲಾದ ಸ್ಪರ್ಧೆಗಳಲ್ಲಿ ಕ್ರಮಾ೦ಕಗಳಲ್ಲಿ ಫಾರ್ಮುಲಾ ಒನ್ ಮೈಲುಗಲ್ಲು ಮುಟ್ಟುವ ಹೆಬ್ಬಯಕೆ ಮಿಹಿರ್‌ಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.