
ನವದೆಹಲಿ: ಚೊಚ್ಚಲ ಆವೃತ್ತಿಯ ಕಬಡ್ಡಿ ಚಾಂಪಿಯನ್ಸ್ ಲೀಗ್ (ಕೆಸಿಎಲ್) ಇದೇ 25ರಿಂದ ಫೆ.7ರವರೆಗೆ ಹರಿಯಾಣದ ರಾಯಿ ಕ್ರೀಡಾ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಕೆಸಿಎಲ್ ಉದ್ಘಾಟನಾ ಋತುವಿನ ಪಂದ್ಯಗಳ ವೇಳಾಪಟ್ಟಿಯನ್ನು ಸೋಮವಾರ ಅಧಿಕೃತವಾಗಿ ಪ್ರಕಟಿಸಲಾಗಿದೆ. 12 ದಿನಗಳ ಕಾಲ ನಡೆಯಲಿರುವ ಈ ಟೂರ್ನಿಯಲ್ಲಿ ಎಂಟು ಫ್ರಾಂಚೈಸಿಗಳ ತಂಡಗಳು ಪ್ರಶಸ್ತಿ ಸೆಣಸಲಿವೆ.
ಸೋನಿಪತ್ ಸ್ಟಾರ್ಸ್, ಗುರುಗ್ರಾಮ್ ಗುರುಸ್, ಹಿಸಾರ್ ಹೀರೋಸ್, ಭಿವಾನಿ ಬುಲ್ಸ್, ರೋಹ್ಟಕ್ ರಾಯಲ್ಸ್, ಕರ್ನಲ್ ಕಿಂಗ್ಸ್, ಪಾಣಿಪತ್ ಪ್ಯಾಂಥರ್ಸ್ ಮತ್ತು ಫರಿದಾಬಾದ್ ಫೈಟರ್ಸ್ ತಂಡಗಳು ಸ್ಪರ್ಧೆಯಲ್ಲಿವೆ.
ಉದ್ಘಾಟನಾ ಪಂದ್ಯದಲ್ಲಿ ಸೋನಿಪತ್ ಸ್ಟಾರ್ಸ್ ಮತ್ತು ಗುರುಗ್ರಾಮ್ ಗುರುಸ್ ತಂಡಗಳು 25ರಂದು ರಾತ್ರಿ 7 ಗಂಟೆಗೆ ಮುಖಾಮುಖಿಯಾಗಲಿದೆ. ಆ ದಿನದ ಎರಡನೇ ಪಂದ್ಯದಲ್ಲಿ ರಾತ್ರಿ 8ಕ್ಕೆ ರೋಹ್ಟಕ್ ರಾಯಲ್ಸ್ ಮತ್ತು ಕರ್ನಲ್ ಕಿಂಗ್ಸ್ ಸೆಣಸಲಿವೆ. ಡಿಡಿ ಸ್ಪೋಟ್ಸ್‌ನಲ್ಲಿ ಪಂದ್ಯಗಳ ನೇರಪ್ರಸಾರವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.