ADVERTISEMENT

ವಿಶ್ವ ಜಂಪಿಂಗ್: ಕೇಕ್ರಿಸಿಲಿ, ತಿಯಾಶಾ, ಶಶಾಂಕ್‌ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 15:30 IST
Last Updated 29 ನವೆಂಬರ್ 2020, 15:30 IST
ಕೆಖ್ರಿಸಿಲಿ ರಿಯೊ
ಕೆಖ್ರಿಸಿಲಿ ರಿಯೊ   

ಬೆಂಗಳೂರು: ಕೆಖ್ರಿಸಿಲಿ ರಿಯೊ, ತ್ರಿಯಾಶಾ ಮತ್ತು ಶಶಾಂಕ್ ಅವರು ನಗರದ ಎಂಬೆಸಿ ಇಂಟರ್‌ನ್ಯಾಷನಲ್ ರೈಡಿಂಗ್ ಸ್ಕೂಲ್‌ನಲ್ಲಿ ಭಾನುವಾರ ನಡೆದ ವಿಶ್ವ ಕುದುರೆ ಜಿಗಿತ ಸ್ಪರ್ಧೆಯ ವಿವಿಧ ವಿಭಾಗಗಳ ಎರಡನೇ ಹಂತದ ಸ್ಪರ್ಧೆಯಲ್ಲಿ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು.

ಕ್ಲಾಡೆಟಿ ಕುದುರೆಯೊಂದಿಗೆ ಭಾಗವಹಿಸಿದಯುಆರ್‌ಬಿ ಕ್ಲಬ್‌ನ ಕೆಖ್ರಿಸಿಲಿ ಅವರು 120ರಿಂದ 130 ಸೆಂಟಿಮೀಟರ್ ವಿಭಾಗದಲ್ಲಿ ಮೊದಲಿಗರಾದರು. ಇದೇ ಕ್ಲಬ್‌ನ ಪ್ರಣಯ್ ಖಾರೆ ದ್ವಿತೀಯರಾದರು. ಅವರು ವೆನಿಲಾ ಸ್ಕೈ ಕುದುರೆಯೊಂದಿಗೆ ಕಣಕ್ಕೆ ಇಳಿದಿದ್ದರು. ಇಐಆರ್‌ಎಸ್‌ನ ವಿವೇಕ್ ಕೊಯ್ಲೊ ಮೂರನೇ ಸ್ಥಾನ ಗಳಿಸಿದರು. ಅವರು ಪೆಲಿಜಿಯಾನ ಕುದುರೆಯೊಂದಿಗೆ ಬಂದಿದ್ದರು.

110ರಿಂದ 120 ಸೆಂಟಿಮೀಟರ್ ವಿಭಾಗದಲ್ಲಿ ಡೆಮಾಕ್ರಟಿಕ್ ಕುದುರೆಯೊಂದಿಗೆ ಕಣಕ್ಕೆ ಇಳಿದಿದ್ದ ಸಿಇಸಿಯ ತಿಯಾಶಾ ಮೊದಲಿಗರಾದರು. ಕರ್ಟ್ ಡಿ ಮೊಂಟ್‌ಪ್ಲೇಜಿರ್ ಕುದುರೆಯೊಂದಿಗೆ ಬಂದಿದ್ದ ಇಐಆರ್‌ಎಸ್‌ನ ಆಶಿಶ್ ಲಿಮಯೆ ದ್ವಿತೀಯ ಸ್ಥಾನ ಗಳಿಸಿದರು. ಸಿಇಸಿಯ ಅಬ್ದೆಲಿ ಮಸಲಿಯಾ ಮತ್ತು ಯುಆರ್‌ಬಿ ಕ್ಲಬ್‌ನ ಕೆಖ್ರಿಸಿಲಿ ಕ್ರಮವಾಗಿ ತೃತೀಯ ಮತ್ತು ನಾಲ್ಕನೇ ಸ್ಥಾನ ಗಳಿಸಿದರು. ಅವರು ಕ್ರಮವಾಗಿ ರಿಕಾರ್ಡೊ ಮತ್ತು ಜಾಲಾ ಕುದುರೆಯ ಜೊತೆ ಸ್ಪರ್ಧೆಗೆ ಇಳಿದಿದ್ದರು.

ADVERTISEMENT

100ರಿಂದ 110 ಸೆಂಟಿಮೀಟರ್ ವಿಭಾಗದಲ್ಲಿ ನೂ ಸ್ಟಾರ್ ಕುದುರೆಯೊಂದಿಗೆ ಸ್ಪರ್ಧಸಿದ್ದ ಇಐಆರ್‌ಎಸ್‌ನ ಶಶಾಂಕ್ ಮೊದಲಿಗರಾದರೆ ಕಾಬ್ರಿನಿ ಕುದುರೆಯೊಂದಿಗೆ ಕಣಕ್ಕೆ ಇಳಿದಿದ್ದ ಸಿಇಸಿಯ ಅಬ್ಬಾಸ್ ಬರ್ಮಲ್‌ ದ್ವಿತೀಯ ಸ್ಥಾನ ತಮ್ಮದಾಗಿಸಿಕೊಂಡರು. ಲುಟ್ರಿಲೊ ಎಲ್‌ವಿ ಕುದುರೆಯೊಂದಿಗೆ ಸ್ಪರ್ಧೆಗೆ ಬಂದಿದ್ದ ಡಿಇಸಿಯ ಬಾಲಾಜಿ ವಿಜಯಶಂಕರ್ ಹಾಗೂ ರೆಡ್‌ ಡ್ರ್ಯಾಗನ್‌ನೊಂದಿಗೆ ಸ್ಪರ್ಧಿಸಿದ್ದ ಯುಆರ್‌ಬಿಯ ಅರ್ಜುನ್ ಕನೋಯ್ ನಾಲ್ಕನೆಯವರಾದರು. ಮೂರನೇ ಸುತ್ತಿನ ಸ್ಪರ್ಧೆ ಡಿಸೆಂಬರ್ ಆರರಂದು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.