ADVERTISEMENT

ಖೇಲೊ ಇಂಡಿಯಾ: ಸೌಬ್ರಿತಿಗೆ 3 ಚಿನ್ನ

ಪಿಟಿಐ
Published 20 ಜನವರಿ 2020, 19:45 IST
Last Updated 20 ಜನವರಿ 2020, 19:45 IST

ಗುವಾಹಟಿ: ಪಶ್ಚಿಮ ಬಂಗಾಳದ ಸೌಬೃತಿ ಮೊಂಡಲ್ ಇಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ಯುವ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಸೋಮವಾರ ಅಮೋಘ ಸಾಧನೆ ಮಾಡಿದರು.

4x100 ಮೀಟರ್ಸ್‌ ಮೆಡ್ಲೆ, 200 ಮೀಟರ್ಸ್ ವೈಯಕ್ತಿಕ ಮೆಡ್ಲೆ ಮತ್ತು 200 ಮೀಟರ್ಸ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಅವರು ಚಿನ್ನ ಗಳಿಸಿ ಸಂಭ್ರಮಿಸಿದರು.

ಮಹಾರಾಷ್ಟ್ರವು 63 ಚಿನ್ನದೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ಈ ರಾಜ್ಯದ ಕ್ರೀಡಾಪಟುಗಳ ಒಟ್ಟು ಪದಕ ಸಾಧನೆ ಸೋಮವಾರ 204ಕ್ಕೆ ಏರಿತು. ಕರ್ನಾಟಕದ ಶ್ರೀಹರಿ ನಟರಾಜ್ ಸೋಮವಾರ ಮತ್ತೊಂದು ಚಿನ್ನ ಗಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.