ADVERTISEMENT

ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟ: ಲತಾ, ಧನಲಕ್ಷ್ಮಿಗೆ ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 19:54 IST
Last Updated 1 ಮಾರ್ಚ್ 2021, 19:54 IST
ಧನಲಕ್ಷ್ಮಿ, ಲತಾ
ಧನಲಕ್ಷ್ಮಿ, ಲತಾ   

ಶಿವಮೊಗ್ಗ: ಕಾಶ್ಮೀರದಲ್ಲಿ ನಡೆಯು ತ್ತಿರುವ ಖೇಲೋ ಇಂಡಿಯಾ ಚಳಿ ಗಾಲದ ಕ್ರೀಡಾಕೂಟದಲ್ಲಿ ಶಿವಮೊಗ್ಗ ತಾಲ್ಲೂಕಿನ ಆಡಿನಕೊಟ್ಟಿಗೆಯ ಧನಲಕ್ಷ್ಮಿ ಹಾಗೂ ಲತಾ ಚಿನ್ನದ ಪದಕ ಗೆದ್ದಿದ್ದಾರೆ.

ಧನಲಕ್ಷ್ಮಿ 5 ಕಿ.ಮೀ. ಹಾಗೂ 1.5 ಕಿ.ಮೀ. ಓಟದ ಸೀನಿಯರ್ ವಿಭಾಗದಲ್ಲಿ, ಲತಾ ಜೂನಿಯರ್ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಇವರಿಬ್ಬರು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಹಾಗೂ ದಕ್ಷಿಣ ವಲಯ ಪರ್ವತಾರೋಹಣ ಪ್ರತಿಷ್ಠಾನ ಸಂಸ್ಥೆ ಗಳಿಂದ ತರಬೇತಿ ಪಡೆದು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕೊಡಗಿನ ಭವಾನಿ ಕಂಚಿನ ಪದಕ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT