ADVERTISEMENT

Khelo India Games | ಬೀಳದ ಹಿಮ; ಚಳಿಗಾಲದ ಕ್ರೀಡೆ ಮುಂದಕ್ಕೆ

ಪಿಟಿಐ
Published 17 ಫೆಬ್ರುವರಿ 2025, 13:19 IST
Last Updated 17 ಫೆಬ್ರುವರಿ 2025, 13:19 IST
<div class="paragraphs"><p>ಚಳಿಗಾಲದ ಕ್ರೀಡೆಗಳು</p></div>

ಚಳಿಗಾಲದ ಕ್ರೀಡೆಗಳು

   

–ಪಿಟಿಐ ಚಿತ್ರ

ಗುಲ್ಮಾರ್ಗ್: ಶನಿವಾರ ಇಲ್ಲಿ ಆರಂಭವಾಗಬೇಕಿದ್ದ ಖೇಲೊ ಇಂಡಿಯಾ ಐದನೇ ಆವೃತ್ತಿಯ ಚಳಿಗಾಲದ ಕ್ರೀಡೆಗಳನ್ನು ಮುಂದೂಡಲಾಗಿದೆ. ಈ ಪ್ರದೇಶದಲ್ಲಿ ಸಾಕಷ್ಟು ಹಿಮಬೀಳದಿರುವುದು ಇದಕ್ಕೆ ಕಾರಣ.

ADVERTISEMENT

ಹವಾಮಾನದಲ್ಲಿ ಸುಧಾರಣೆಯಾದ ನಂತರ ಎರಡನೇ (ಜಮ್ಮು ಮತ್ತು ಕಾಶ್ಮೀರ) ಲೆಗ್‌ನ ಪರಿಷ್ಕೃತ ದಿನಾಂಕಗಳನ್ನು ಪ್ರಕಟಿಸಲಾಗುವುದು ಎಂದು ಕ್ರೀಡಾ ಸಚಿವಾಲಯದ ಮೂಲಗಳು ತಿಳಿಸಿವೆ.

ಸ್ಕೀಯಿಂಗ್, ನಾರ್ಡಿಕ್ ಸ್ಕೀಯಿಂಗ್‌, ಸ್ಕೀ ಪರ್ವತಾರೋಹಣ ಮತ್ತು ಸ್ನೋ ಬೋರ್ಡಿಂಗ್ ಆಟಗಳಿಗೆ ಹಿಮರಾಶಿ ಅಗತ್ಯವಿರುತ್ತದೆ. ಲೇಹ್‌ನಲ್ಲಿ ಜನವರಿ 23 ರಿಂದ 27ರವರೆಗೆ ಮೊದಲ ಲೆಗ್‌ ನಡೆದಿತ್ತು. ಐಸ್‌ ಹಾಕಿ ಮತ್ತು ಸ್ಕೇಟಿಂಗ್ ಸ್ಪರ್ಧೆಗಳು ನಡೆದಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.