ADVERTISEMENT

ಮಾರ್ಚ್‌ 9ರಿಂದ ಖೇಲೊ ಇಂಡಿಯಾ ಕ್ರೀಡಾಕೂಟ: ಕಾಶ್ಮೀರದ ಗುಲ್ಮಾರ್ಗ್‌ ಆತಿಥ್ಯ

ಪಿಟಿಐ
Published 3 ಮಾರ್ಚ್ 2025, 16:24 IST
Last Updated 3 ಮಾರ್ಚ್ 2025, 16:24 IST
   

ಶ್ರೀನಗರ: ಇದೇ ತಿಂಗಳ 9ರಿಂದ 12ರವರೆಗೆ ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಖೇಲೊ ಇಂಡಿಯಾ ಚಳಿಗಾಲದ  ಕ್ರೀಡಾಕೂಟ (ಕೆಐಡಬ್ಲ್ಯುಜಿ) ನಡೆಯಲಿದೆ. 

ಈ ಹಿಂದೆ ನಿಗದಿಯಾದಂತೆ ಕ್ರೀಡಾಕೂಟವು ಫೆಬ್ರುವರಿ 22ರಿಂದ 25ರವರೆಗೆ ನಡೆಯಬೇಕಿತ್ತು. ಆದರೆ ಈ ಪ್ರದೇಶದಲ್ಲಿ ವಾಡಿಕೆಯ ಪ್ರಮಾಣದಲ್ಲಿ ಹಿಮಬೀಳದ ಕಾರಣ ಕ್ರೀಡಾಕೂಟವನ್ನು ಮುಂದೂಡಲಾಗಿತ್ತು.

‘ಖೇಲೊ ಇಂಡಿಯಾ ಕ್ರೀಡಾಕೂಟದ ಆತಿಥ್ಯವನ್ನು ವಹಿಸಲು ನಾವು ಸಜ್ಜಾಗಿದ್ದೇವೆ. ದೇಶದ ಅಗ್ರ ಅಥ್ಲೀಟ್‌ಗಳು ಭಾಗವಹಿಸಲಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಕ್ರೀಡಾ ಕೌನ್ಸಿಲ್‌ನ ಕಾರ್ಯದರ್ಶಿ ನುಜಾತ್‌ ಗುಲ್‌ ತಿಳಿಸಿದ್ದಾರೆ.   

ADVERTISEMENT

ಇದು ಎರಡನೇ ಲೆಗ್‌ ಇದಾಗಿದ್ದು ಸ್ಪರ್ಧೆಯಲ್ಲಿ ಸ್ಕೈಯಿಂಗ್‌ ಮತ್ತು ಸ್ನೋಬೋರ್ಡಿಂಗ್‌ ನಡೆಯಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.