ADVERTISEMENT

ಖೇಲೊ ಇಂಡಿಯಾ: ಚೈತ್ರಾಗೆ ಸೈಕ್ಲಿಂಗ್‌ ಚಿನ್ನ

​ಪ್ರಜಾವಾಣಿ ವಾರ್ತೆ
Published 10 ಜೂನ್ 2022, 19:45 IST
Last Updated 10 ಜೂನ್ 2022, 19:45 IST
ಚೈತ್ರಾ ಬೋರ್ಜಿ
ಚೈತ್ರಾ ಬೋರ್ಜಿ   

ಬೆಂಗಳೂರು: ಕರ್ನಾಟಕದ ಚೈತ್ರಾ ಬೋರ್ಜಿ ಖೇಲೊ ಇಂಡಿಯಾ ಯೂತ್ ಗೇಮ್ಸ್‌ನ ಸೈಕ್ಲಿಂಗ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

ಹರಿಯಾಣದ ಪಂಚಕುಲಾದಲ್ಲಿ ನಡೆ ಯುತ್ತಿರುವ ಗೇಮ್ಸ್‌ನ 18 ವರ್ಷದೊಳಗಿನ ಬಾಲಕಿಯರ ವಿಭಾಗದ20 ಕಿ.ಮೀ ವೈಯಕ್ತಿಕ ಟೈಮ್‌ ಟ್ರಯಲ್ಸ್‌ನಲ್ಲಿ ಚೈತ್ರಾಗೆ ಪದಕ ಒಲಿಯಿತು. ಬಾಗಲಕೋಟೆಜಿಲ್ಲೆಯ ಜಮಖಂಡಿಯ ಚೈತ್ರಾ32 ನಿಮಿಷ 51.84 ಸೆಕೆಂಡುಗಳಲ್ಲಿ ಗುರಿ ತಲುಪಿದರು.

ಈಜಿನಲ್ಲಿ ಮತ್ತೆ ರಿಧಿಮಾ ಮಿಂಚು: ಬಾಲಕಿಯರ 50 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ರಿಧಿಮಾ ವೀರೇಂದ್ರ ಕುಮಾರ್ ದಾಖಲೆಯೊಂದಿಗೆ ಚಿನ್ನ ಗೆದ್ದರು. 29.88 ಸೆಕೆಂಡುಗಳಲ್ಲಿ ಅವರು ಗುರಿ ತಲುಪಿದರು. ಇದೇ ವಿಭಾಗದಲ್ಲಿ ನೀನಾ ವೆಂಕಟೇಶ್‌ ಬೆಳ್ಳಿ ಮತ್ತು ಶಾಲಿನಿ ದೀಕ್ಷಿತ್ ಕಂಚು ಜಯಿಸಿದರು.

ADVERTISEMENT

400 ಮೀ. ವೈಯಕ್ತಿಕ ಮೆಡ್ಲೆಯಲ್ಲಿ (5 ನಿ.13.1 ಸೆ.) ಹಷಿಕಾ ರಾಮಚಂದ್ರ ಚಿನ್ನ, ಎ. ಜೆದಿಹಾ ಕಂಚು ಜಯಿಸಿದರು. 100 ಮೀ. ಫ್ರೀಸ್ಟೈಲ್‌ನಲ್ಲಿ ರಿಧಿಮಾ ಕಂಚು ಗೆದ್ದರು.

ಅನೀಶ್‌ ಗೌಡ ಬಾಲಕರ 400 ಮೀ. ಫ್ರೀಸ್ಟೈಲ್‌ನಲ್ಲಿ (3 ನಿ. 59.37ಸೆ.), ಉತ್ಕರ್ಷ್ ಪಾಟೀಲ್‌50 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ (27. 52 ಸೆ.), ಸಂಭವ್ ಆರ್‌. 100 ಮೀ. ಫ್ರೀಸ್ಟೈಲ್‌ನಲ್ಲಿ (52.57ಸೆ.) ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.