ADVERTISEMENT

ಕೊಕ್ಕೊ: ರೈಲ್ವೇಸ್‌, ಮಹಾರಾಷ್ಟ್ರಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 13:43 IST
Last Updated 15 ಜನವರಿ 2026, 13:43 IST
ಕೊಕ್ಕೊ ಪಂದ್ಯಾವಳಿ
ಕೊಕ್ಕೊ ಪಂದ್ಯಾವಳಿ   

ಕಾಝಿಪೇಟ್ (ತೆಲಂಗಾಣ): ಹಾಲಿ ಚಾಂಪಿಯನ್ ರೈಲ್ವೇಸ್ ಮತ್ತು ಮಹಾರಾಷ್ಟ್ರ ತಂಡಗಳು, 58ನೇ ಸೀನಿಯರ್ ರಾಷ್ಟ್ರೀಯ ಕೊಕ್ಕೊ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡವು.

ರೈಲ್ವೇಸ್ ತಂಡವು ಸತತ ಎರಡನೇ ಬಾರಿ ಚಾಂಪಿಯನ್ ಆದರೆ, ಮಹಾರಾಷ್ಟ್ರ ವನಿತೆಯರು ನಿರಂತರ ಐದನೇ ಬಾರಿ ಕಿರೀಟ ತಮ್ಮದಾಗಿಸಿಕೊಂಡಿದ್ದಾರೆ. ರೋಚಕವಾಗಿದ್ದ ಮಹಿಳಾ ವಿಭಾಗದ ಫೈನಲ್‌ನಲ್ಲಿ ಮಹಾರಾಷ್ಟ್ರ 23–22 ರಿಂದ ಒಡಿಶಾ ತಂಡನ್ನು ಮಣಿಸಿತು.

ರೈಲ್ವೇಸ್‌ ಪುರುಷರ ವಿಭಾಗದ ಫೈನಲ್‌ನಲ್ಲಿ ಹೋರಾಟವಾಡಿ 26–21 ರಿಂದ ಮಹಾರಾಷ್ಟ್ರ ವಿರುದ್ಧ ಜಯಗಳಿಸಿತು. ಕುತೂಹಲದ ವಿಷಯವೆಂದರೆ ಒಡಿಶಾ (ಮಹಿಳಾ ವಿಭಾಗ) ಮತ್ತು ಮಹಾರಾಷ್ಟ್ರ (ಪುರುಷರ ವಿಭಾಗ) ತಂಡಗಳು ಸತತ ಎರಡನೇ ಸಲ ರನ್ನರ್ ಅಪ್ ಆಗಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.