ADVERTISEMENT

ಕಿಕ್‌ಬಾಕ್ಸಿಂಗ್‌: 2 ಚಿನ್ನ ಗೆದ್ದ ಪ್ರಿಯಾಂಕಾ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 20:11 IST
Last Updated 22 ಫೆಬ್ರುವರಿ 2020, 20:11 IST
ಎಲ್‌.ಪ್ರಿಯಾಂಕಾ
ಎಲ್‌.ಪ್ರಿಯಾಂಕಾ   

ಬೆಂಗಳೂರು:ನಗರದ ಸಿಎಂಆರ್ ಇನ್‌ಸ್ಟಿಟ್ಯೂಟ್‌ ‌ಆಫ್ ಟೆಕ್ನಾಲಜಿಯ ವಿದ್ಯಾರ್ಥಿನಿ ಎಲ್.ಪ್ರಿಯಾಂಕಾ ರೆಡ್ಡಿ, ನವದೆಹಲಿಯ ಟಾಲ್ಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಮೊಟ್ಟಮೊದಲ ವಾಕೊ ಇಂಡಿಯನ್ ಓಪನ್ ಇಂಟರ್‌ನ್ಯಾಷನಲ್‌ ಕಿಕ್‍ಬಾಕ್ಸಿಂಗ್ ಟೂರ್ನಿಯಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾಳೆ.

55 ಕೆಜಿ ತೂಕ ವಿಭಾಗದ ಕಿಕ್ ಲೈಟ್ ಮತ್ತು ಪಾಯಿಂಟ್ ಫೈಟ್ ಸ್ಪರ್ಧೆಗಳಲ್ಲಿ ಅವರು ಮೊದಲಿಗರಾದರು. ಫೈನಲ್‌ನಲ್ಲಿ ಹರಿಯಾಣದಎದುರಾಳಿಯನ್ನು 3-0 ಅಂತರದಿಂದ ಮಣಿಸಿದರು.

ಈ ಟೂರ್ನಿಯನ್ನು ವಾಕೊ ಇಂಡಿಯಾ ಕಿಕ್‍ಬಾಕ್ಸಿಂಗ್ ಫೆಡರೇಷನ್ (ಡಬ್ಲ್ಯೂಐಕೆಎಫ್) ಆಯೋಜಿಸಿತ್ತು. ಪ್ರಿಯಾಂಕಾ, ಇಸಿಇ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿನಿ. 12 ದೇಶಗಳಿಂದ ಸ್ಪರ್ಧಿಗಳು ಈ ಕೂಟದಲ್ಲಿ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.