ADVERTISEMENT

ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಕಿದಂಬಿ ಶ್ರೀಕಾಂತ್

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2018, 6:17 IST
Last Updated 1 ಆಗಸ್ಟ್ 2018, 6:17 IST
ಕಿದಂಬಿ ಶ್ರೀಕಾಂತ್  (ಸಂಗ್ರಹ ಚಿತ್ರ)
ಕಿದಂಬಿ ಶ್ರೀಕಾಂತ್ (ಸಂಗ್ರಹ ಚಿತ್ರ)   

ನಾನ್ ಜಿಂಗ್, ಚೀನಾ: ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್‌ ವಿಭಾಗದ ಸ್ಪರ್ಧೆಯಲ್ಲಿ ಐದನೆ ಶ್ರೇಯಾಂಕದ ಆಟಗಾರ ಕಿದಂಬಿ ಶ್ರೀಕಾಂತ್ ಸ್ಪೇನ್ ದೇಶದ ಪ್ಯಾಬ್ಲೊ ಅಬಿಯನ್‌‍ರನ್ನು ಪರಾಭವಗೊಳಿಸಿದ್ದಾರೆ.

ಬುಧವಾರ ನಡೆದ ಎರಡನೇ ಸುತ್ತಿನ ಸ್ಪರ್ಧೆಯಲ್ಲಿ ಪಾಬ್ಲೊ ಅವರನ್ನು ಶ್ರೀಕಾಂತ್ 15-21, 21-12, 14-21 ಅಂತರದಿಂದ ಸೋಲಿಸಿ, ಪ್ರಿಕ್ವಾರ್ಟರ್ಫೈನಲ್‍ಗೆ ಪ್ರವೇಶಿಸಿದ್ದಾರೆ.

ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪೈಪೋಟಿಯಲ್ಲಿ ಶ್ರೀಕಾಂತ್‌ 21–15, 21–16ರಲ್ಲಿ ಐರ್ಲೆಂಡ್‌ನ ನಾಟ್‌ ಜುಯೆನ್‌ ಅವರನ್ನು ಪರಾಭವಗೊಳಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.