ADVERTISEMENT

ಬ್ಯಾಸ್ಕೆಟ್‌ಬಾಲ್‌ | ಕೋರಮಂಗಲ ಎಸ್‌ಸಿ ತಂಡಕ್ಕೆ ಗೆಲುವು

ರಾಜ್ಯ ಬಿ ಡಿವಿಷನ್‌ ಲೀಗ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 3 ಮೇ 2025, 16:04 IST
Last Updated 3 ಮೇ 2025, 16:04 IST
<div class="paragraphs"><p>ಬ್ಯಾಸ್ಕೆಟ್‌ಬಾಲ್‌</p></div>

ಬ್ಯಾಸ್ಕೆಟ್‌ಬಾಲ್‌

   

ಬೆಂಗಳೂರು: ಕೋರಮಂಗಲ ಎಸ್‌ಸಿ ತಂಡವು ಎಂ.ಸಿ. ಶ್ರೀನಿವಾಸ ಸ್ಮರಣಾರ್ಥ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಬಿ ಡಿವಿಷನ್‌ ಪುರುಷರ ಬ್ಯಾಸ್ಕೆಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಬಾಷ್‌ ತಂಡದ ವಿರುದ್ಧ 77–72 ಅಂಕಗಳಿಂದ ಜಯಗಳಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೋರಮಂಗಲ ಎಸ್‌ಸಿ ತಂಡದ ಪರವಾಗಿ ಶಿವಂ (21 ಅಂಕ), ಲಾಲ್ರಿನ್‌ (18 ಅಂಕ) ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಬಾಷ್‌ ಪರ ವಿಜಯ್‌ (17 ಅಂಕ), ಕಾರ್ತಿಕ್‌ (16 ಅಂಕ) ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ.

ADVERTISEMENT

ಇನ್ನೊಂದು ಪಂದ್ಯದಲ್ಲಿ ಐಬಿಬಿಸಿ ತಂಡ 76–71 ಅಂಕಗಳಿಂದ ಬೆಂಗಳೂರು ವ್ಯಾನ್‌ಗಾರ್ಡ್‌  ವಿರುದ್ಧ ಜಯಿಸಿತು.ಐಬಿಬಿಸಿ ತಂಡದ ಪರ ಕರಣ್‌ ಅಯ್ಯಪ್ಪ (21 ಅಂಕ), ಸುರೇಶ್‌ (18 ಅಂಕ) ಗೆಲುವಿನ ರೂವಾರಿಯಾದರು. ವ್ಯಾನ್‌ಗಾರ್ಡ್‌ ತಂಡದ ಅಕ್ಷನ್‌ (32 ಅಂಕ), ಅವಿನಾಶ್‌ (16 ಅಂಕ) ಅವರ ಆಟ ಗೆಲುವಿಗೆ ಸಾಲಲಿಲ್ಲ. 

ಮತ್ತೊಂದು ಪಂದ್ಯದಲ್ಲಿ ವಿಮಾನಪುರ ಎಸ್‌ಸಿ ತಂಡ 61–50 ಅಂಕಗಳಿಂದ ಬೆಂಗಳೂರು ಸ್ಪೋರ್ಟಿಂಗ್‌ ತಂಡವನ್ನು 11 ಅಂಕಗಳಿಂದ ಮಣಿಸಿತು. ವಿಮಾನಪುರ ತಂಡದ ಪರ ದೇವ್‌ (20 ಅಂಕ) ಉತ್ತಮ ಆಟ ಪ್ರದರ್ಶಿಸಿದರು. ಸ್ಪೋರ್ಟಿಂಗ್‌ ಪರ ಅಬೆಲ್‌ (19 ಅಂಕ) ಗುರಿಎಸೆತದಲ್ಲಿ ಮಿಂಚಿದರು.

ಮತ್ತೊಂದು ಪಂದ್ಯದಲ್ಲಿ ಭಾರತ್‌ ಎಸ್‌ಯು ತಂಡ 67–43 ಅಂಕಗಳಿಂದ ವೈಎಂಎಂಎ ತಂಡವನ್ನು ಸೋಲಿಸಿತು. ಭಾರತ್‌ ತಂಡದ ಪರ ಅಕ್ಷಯ್‌ (19 ಅಂಕ), ಹಾರ್ದಿಕ್‌ (15 ಅಂಕ) ಉತ್ತಮವಾಗಿ ಆಡಿದರು. ವೈಎಂಎಂಎ ತಂಡದ ಪರ ರವಿಕುಮಾರ್‌ (9 ಅಂಕ) ಹೋರಾಟ ನಡೆಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.