ಬೆಂಗಳೂರು: ಕರ್ನಾಟಕ ರಾಜ್ಯ ಬಿಲಿಯರ್ಡ್ಸ್ ಸಂಸ್ಥೆಗೆ ಎಚ್.ಆರ್. ರತನಕುಮಾರ್ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಭಾನುವಾರ ನಡೆದ ಸರ್ವಸದಸ್ಯರ ಸಭೆಯಲ್ಲಿ ಪದಾಧಿಕಾರಿಗಳು ಮತ್ತು ಆಡಳಿತ ಸಮಿತಿ ಸದಸ್ಯರ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಸಿ.ಆರ್. ನಂದಕುಮಾರ್ ಮತ್ತು ಕಾರ್ಯದರ್ಶಿಯಗಿ ಎಚ್.ಇ. ಆನಂದ್ ಆಯ್ಕೆಯಾದರು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆಡಳಿತ ಸಮಿತಿ: ಎಚ್.ಆರ್. ರತನಕುಮಾರ್ (ಅಧ್ಯಕ್ಷ), ಸಿ.ಆರ್. ನಂದಕುಮಾರ್ (ಉಪಾಧ್ಯಕ್ಷ), ಎಚ್.ಇ. ಆನಂದ (ಕಾರ್ಯದರ್ಶಿ), ಐ.ಎಚ್. ಮನುದೇವ್ (ಜಂಟಿ ಕಾರ್ಯದರ್ಶಿ), ಎನ್. ಗಿರೀಶ (ಖಜಾಂಚಿ), ಸದಸ್ಯರು: ಅರುಣಾನಂದ, ಎಂ.ಎಸ್. ಅರುಣ್, ಚೇತನ್ ನಂಜಪ್ಪ, ಬಿ.ಎಲ್. ಹರ್ಷದೀಪ್, ಬಿ.ಸಿ. ಕಾರ್ತಿಕ್ ರವೂಫ್ ಉರ್ ರೆಹಮಾನ್, ಸಂಜಯ್ ಎಂ. ಪಂಜಾಬಿ, ಎಸ್. ಶೇಖರ್, ವರ್ಗೀಸ್ ಪಲ್ಲತ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.