ನಿಕೋಸಿಯಾ: ಒಲಿಂಪಿಯನ್ ಕಿನಾನ್ ಡೇರಿಯಸ್ ಚೆನೈ ಮತ್ತು ಸಬೀರಾ ಹ್ಯಾರಿಸ್ ಅವರು ಐಎಸ್‌ಎಸ್‌ಎಫ್ ಶಾಟ್ ಗನ್ ವಿಶ್ವಕಪ್‌ನ ಅಂತಿಮ ದಿನವಾದ ಭಾನುವಾರ ಟ್ರ್ಯಾಪ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡರು.
ಭಾರತದ ಜೋಡಿ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಟರ್ಕಿಯ ತೊಲ್ಗಾ ತುನ್ಸರ್– ಪೆಲಿನ್ ಕಾಯಾ ಜೋಡಿಯನ್ನು 34–33 ರತಿಂದ ಸೋಲಿಸಿತು. ಇದರೊಡನೆ ಭಾರತ ಈ ವಿಶ್ವಕಪ್ ಅನ್ನು ಒಂದು ಕಂಚಿನ ಪದಕದೊಡನೆ ಪೂರೈಸಿತು. ಈ ಸ್ಪರ್ಧೆಯಲ್ಲಿ ಚೀನಾ ಚಿನ್ನ ಗೆದ್ದರೆ, ಪೋಲೆಂಡ್ ಕಂಚಿನ ಪದಕ ತನ್ನದಾಗಿಸಿಕೊಂಡಿತು.
ಕ್ವಾಲಿಫಿಕೇಷನ್ ಸುತ್ತಿನಲ್ಲಿ 34 ತಂಡಗಳಿದ್ದು ಭಾರತದ ಜೋಡಿ ನಾಲ್ಕನೇ ಸ್ಥಾನದೊಡನೆ ಫೈನಲ್‌ಗೆ ಅರ್ಹತೆ ಪಡೆದಿತ್ತು
ವೈಯಕ್ತಿಕ ಸ್ಪರ್ಧೆಯಲ್ಲಿ ಹಿನ್ನಡೆ:
ಇದಕ್ಕೆ ಮೊದಲು, ಶನಿವಾರ ನಡೆದ ಟ್ರ್ಯಾಪ್ ವೈಯಕ್ತಿಕ ವಿಭಾಗದಲ್ಲಿ ಕಿನಾನ್ ಅವರು ಅರ್ಹತಾ ಸುತ್ತಿನ ಅಂತಿಮ ರ್‍ಯಾಂಕಿಂಗ್‌ನಲ್ಲಿ 17ನೇ ಸ್ಥಾನ ಪಡೆದಿದ್ದರು. ಶಾರ್ದೂಲ್ ವಿಹಾನ್ ಮತ್ತು ಭೌನೀಶ್ ಮೆಂಡಿರಟ್ಟಾ ಅವರು ಕ್ರಮವಾಗಿ 62 ಮತ್ತು 65ನೇ ಸ್ಥಾನ ಗಳಿಸಿದರು.
ಮಹಿಳೆಯರ ವಿಭಾಗದಲ್ಲಿ ಕೀರ್ತಿ ಗುಪತ್ತಾ, ರಾಜೇಶ್ವರಿ ಕುಮಾರಿ ಮತ್ತು ಸಬೀರಾ ಹ್ಯಾರಿಸ್ ಅವರೂ ಅಂತಿಮ ಸುತ್ತಿಗೇರಲು ವಿಫಲರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.