ADVERTISEMENT

ಬ್ಯಾಡ್ಮಿಂಟನ್‌: 25ನೇ ಸ್ಥಾನಕ್ಕೆ ಕುಸಿದ ಸೇನ್‌

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 18:50 IST
Last Updated 21 ಮಾರ್ಚ್ 2023, 18:50 IST
ಲಕ್ಷ್ಯ ಸೇನ್‌
ಲಕ್ಷ್ಯ ಸೇನ್‌   

ನವದೆಹಲಿ: ಭಾರತದ ಬ್ಯಾಡ್ಮಿಂಟನ್‌ ಆಟಗಾರ ಲಕ್ಷ್ಯ ಸೇನ್‌ ಅವರು ಬಿಡಬ್ಲ್ಯುಎಫ್‌ ರ್‍ಯಾಂಕಿಂಗ್‌ನಲ್ಲಿ ಆರು ಸ್ಥಾನಗಳಷ್ಟು ಕುಸಿತ ಕಂಡಿದ್ದು, ಅಗ್ರ 20 ರಿಂದ ಹೊರ ಬಿದ್ದಿದ್ದಾರೆ.

ಮಂಗಳವಾರ ಬಿಡುಗಡೆಯಾದ ನೂತನ ಪಟ್ಟಿಯಲ್ಲಿ ಅವರು 25ನೇ ಸ್ಥಾನ ಗಳಿಸಿದ್ದಾರೆ. ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ನ ಎರಡನೇ ಸುತ್ತಿನಲ್ಲಿ ಸೋತದ್ದು ಅವರು ರ್‍ಯಾಂಕಿಂಗ್‌ನಲ್ಲಿ ಕುಸಿತ ಕಾಣಲು ಕಾರಣ.

21 ವರ್ಷದ ಸೇನ್‌ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದರಲ್ಲದೆ, ವೃತ್ತಿಜೀವನದ ಅತ್ಯುತ್ತಮ ರ್‍ಯಾಂಕಿಂಗ್‌ ಹೊಂದಿದ್ದರು. ಆ ಬಳಿಕ ಅವರಿಂದ ಉತ್ತಮ ಪ್ರದರ್ಶನ ಮೂಡಿಬಂದಿಲ್ಲ. ಮಲೇಷ್ಯಾ ಓಪನ್‌, ಇಂಡಿಯಾ ಓ‍ಪನ್‌ ಮತ್ತು ಜರ್ಮನಿ ಓಪನ್‌ ಟೂರ್ನಿಗಳಲ್ಲಿ ಬೇಗನೇ ಹೊರಬಿದ್ದಿದ್ದರು.

ADVERTISEMENT

ಎಚ್‌.ಎಚ್‌.ಪ್ರಣಯ್‌ ಒಂಬತ್ತನೇ ಸ್ಥಾನವನ್ನು ಉಳಿಸಿಕೊಂಡರೆ, ಕಿದಂಬಿ ಶ್ರೀಕಾಂತ್‌ 20ನೇ ಸ್ಥಾನಕ್ಕೇರಿದ್ದಾರೆ.

ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಪಿ.ವಿ.ಸಿಂಧು ಒಂಬತ್ತನೇ ಸ್ಥಾನದಲ್ಲಿದ್ದರೆ, ಸೈನಾ ನೆಹ್ವಾಲ್‌ ಅವರು ಐದು ಸ್ಥಾನ ಕುಸಿತ ಕಂಡಿದ್ದು, 32ನೇ ಸ್ಥಾನ ಹೊಂದಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರು ಆರನೇ ಸ್ಥಾನ ಕಾಪಾಡಿಕೊಂಡಿದ್ದು, ಮಹಿಳೆಯರ ಡಬಲ್ಸ್‌ನಲ್ಲಿ ತ್ರಿಶಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್‌ 18ನೇ ಸ್ಥಾನದಲ್ಲಿದ್ದಾರೆ. ಆಲ್‌ ಇಂಗ್ಲೆಂಡ್‌ ಓಪನ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದರೂ, ಇವರು ಒಂದು ಸ್ಥಾನ ಕುಸಿತ ಕಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.