ADVERTISEMENT

ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌: ಲಿನೇಶಾ ಕೂಟ ದಾಖಲೆ

ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 15:30 IST
Last Updated 8 ಸೆಪ್ಟೆಂಬರ್ 2022, 15:30 IST
ಎ.ಕೆ.ಲಿನೇಶಾ
ಎ.ಕೆ.ಲಿನೇಶಾ   

ಗುವಾಹಟಿ: ಕರ್ನಾಟಕದ ಎ.ಕೆ.ಲಿನೇಶಾ ಅವರು ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಮಹಿಳೆಯರ 200 ಮೀ. ಬ್ರೆಸ್ಟ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು.

ಗುವಾಹಟಿಯ ಡಾ. ಜಾಕೀರ್ ಹುಸೇನ್ ಈಜುಕೇಂದ್ರದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ನಾಲ್ಕನೇ ದಿನವಾದ ಗುರುವಾರ ಅವರು 2 ನಿಮಿಷ 39.38 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಪಂಜಾಬ್‌ನ ಚಾಹತ್‌ ಅರೋರಾ (2ನಿ. 42.71 ಸೆ.) ಬೆಳ್ಳಿ ಹಾಗೂ ಕರ್ನಾಟಕದ ಎಸ್‌.ಲಕ್ಷ್ಯಾ (2ನಿ. 43.87 ಸೆ.) ಕಂಚು ಗೆದ್ದುಕೊಂಡರು.

ಉತ್ತಮ ಪ್ರದರ್ಶನ ಮುಂದುವರಿಸಿದ ಎಸ್‌.ಶಿವ ಪುರುಷರ 400 ಮೀ. ಮೆಡ್ಲೆಯಲ್ಲಿ (4 ನಿ. 31.71 ಸೆ.) ಅಗ್ರಸ್ಥಾನ ಗಳಿಸಿದರು.

ADVERTISEMENT

ತನಿಷಿ ಗುಪ್ತಾ ಅವರು ಮಹಿಳೆಯರ 50 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ (29.03 ಸೆ.) ಮೂರನೇ ಸ್ಥಾನ ಪಡೆದರು. ಹರಿಯಾಣದ ದಿವ್ಯಾ ಸತಿಜಾ (28.57 ಸೆ.) ಮತ್ತು ಮಹಾರಾಷ್ಟ್ರದ ನಂದಿನಿ ಕ್ರಮವಾಗಿ ಮೊದಲ ಎರಡು ಸ್ಥಾನ ಪಡೆದುಕೊಂಡರು.

ಮಹಿಳೆಯರ 4X100 ಮೀ. ಮೆಡ್ಲೆ ರಿಲೇಯಲ್ಲಿ ಕರ್ನಾಟಕ ತಂಡ ಅಗ್ರಸ್ಥಾನ ಗಳಿಸಿತು. ಆರುಷಿ ಅಗರವಾಲ್‌, ತನಿಷಿ ಗುಪ್ತಾ, ಮಾನವಿ ವರ್ಮಾ ಮತ್ತು ಎಸ್‌.ರುಜುಲಾ ಅವರನ್ನೊಳಗೊಂಡ ತಂಡ 4 ನಿ. 33.48 ಸೆ.ಗಳಲ್ಲಿ ಗುರಿ ತಲುಪಿತು. ಬಂಗಾಳ ಎರಡನೇ ಸ್ಥಾನ ಹಾಗೂ ಮಹಾರಾಷ್ಟ್ರ ಮೂರನೇ ಸ್ಥಾನ ಪಡೆಯಿತು.

ಮೂರು ದಿನಗಳ ಸ್ಪರ್ಧೆಯ ಬಳಿಕ ಕರ್ನಾಟಕ 9 ಚಿನ್ನ, 3 ಬೆಳ್ಳಿ ಮತ್ತು 5 ಕಂಚಿನ ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.