ADVERTISEMENT

ಪ್ಯಾರಿಸ್ ಒಲಿಂಪಿಕ್ಸ್‌ ಟಿಟಿ: ಹರ್ಮಿತ್‌ಗೆ ಝೈದ್ ಸವಾಲು

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 15:42 IST
Last Updated 26 ಜುಲೈ 2024, 15:42 IST
<div class="paragraphs"><p> ಹರ್ಮಿತ್ ದೇಸಾಯಿ</p></div>

ಹರ್ಮಿತ್ ದೇಸಾಯಿ

   

ಪಿಟಿಐ ಚಿತ್ರ

ಪ್ಯಾರಿಸ್ ಒಲಿಂಪಿಕ್ಸ್‌ ಧ್ವಜಧಾರಿ ಅಚಂತ ಶರತ್ ಕಮಲ್ ನಾಯಕತ್ವದ ಟೇಬಲ್ ಟೆನಿಸ್ ತಂಡವು ಶನಿವಾರ ತನ್ನ ಅಭಿಯಾನ ಆರಂಭಿಸಲಿದೆ.

ADVERTISEMENT

ಪುರುಷರ ಸಿಂಗಲ್ಸ್‌ನಲ್ಲಿ ಗುಜರಾತ್‌ನ 31 ವರ್ಷದ ಹರ್ಮಿತ್ ದೇಸಾಯಿ ಅವರು ಜೋರ್ಡಾನ್‌ನ ಝೈದ್ ಅಬೊ ಯಮನ್ ವಿರುದ್ಧ ಸೆಣಸಲಿದ್ದಾರೆ. 63ನೇ ರ‍್ಯಾಂಕ್ ಆಟಗಾರ ಹರ್ಮಿತ್ 2022ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ತಂಡ ವಿಭಾಗದ ಚಿನ್ನ ಗೆದ್ದ ಭಾರತದ ಬಳಗದಲ್ಲಿದ್ದರು.

ಇದೇ ವಿಭಾಗದಲ್ಲಿ 41 ವರ್ಷದ ಶರತ್ ಕಮಲ್ ಅವರು  ತಮ್ಮ ಮೊದಲ ಪಂದ್ಯದಲ್ಲಿ ಸ್ಲೊವೆನಿಯಾದ ಡೆನಿ ಕೊಜುಲ್ ವಿರುದ್ಧ ಆಡಲಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನಲ್ಲಿ ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನದ ಪದಕವಿಜೇತೆ ಮಣಿಕಾ ಬಾತ್ರಾ ಅವರು  ಗ್ರೇಟ್‌ ಬ್ರಿಟನ್‌ನ ಅನಾ ಹರ್ಸೆ ವಿರುದ್ಧ ಆಡುವರು. 18ನೇ ಶ್ರೇಯಾಂಕದ ಮಣಿಕಾ ಅವರು 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 32ರ ಘಟ್ಟಕ್ಕೆ ತಲುಪಿದ್ದರು.

ಪುರುಷರ ತಂಡ ವಿಭಾಗದಲ್ಲಿ ಶರತ್ ಕಮಲ್, ದೇಸಾಯಿ ಮತ್ತು ಮಾನವ್ ಠಕ್ಕರ್ ಇದ್ದಾರೆ. ಮಹಿಳೆಯರ ತಂಡದಲ್ಲಿ ಮಣಿಕಾ, ಶ್ರೀಜಾ ಅಕುಲಾ ಹಾಗೂ ಕರ್ನಾಟಕದ ಅರ್ಚನಾ ಕಾಮತ್ ಇದ್ದಾರೆ. ಜಿ. ಸತ್ಯನ್, ಐಹಿಕಾ ಮುಖರ್ಜಿ ಕಾಯ್ದಿಟ್ಟ ಆಟಗಾರರಾಗಿದ್ದಾರೆ.

58 ವರ್ಷದ ಝಿಯಾಂಗ್ ಪದಾರ್ಪಣೆ

ಸ್ಯಾಂಟಿಯಾಗೊ: ಝೆಂಗ್ ಝಿಯಾಂಗ್  ಅವರಿಗೆ ಈಗ 58 ವರ್ಷ. ಅವರು 1989ರಲ್ಲಿ ಚೀನಾದಿಂದ ಚಿಲಿಗೆ ವಲಸೆ ಹೋದರು. ಅಲ್ಲಿಯೇ ಮಕ್ಕಳಿಗೆ ಟೇಬಲ್ ಟೆನಿಸ್ ಕಲಿಸುವ ಕಾಯಕ ಮಾಡಿದರು. ಇದೀಗ ಅವರು ಚಿಲಿ ಮಹಿಳಾ ತಂಡವನ್ನು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪ್ರತಿನಿಧಿಸಲಿದ್ದಾರೆ.

ಇದು ಅವರಿಗೆ ಚೊಚ್ಚಲ ಒಲಿಂಪಿಕ್ಸ್ ಆಗಿದೆ. ಅವರು ಹೋದ ವರ್ಷ ಪ್ಯಾನ್ ಅಮೆರಿಕನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.